ಮುಂಬೈ

ಬರೋಡಾದ ಮೆಘಾ ಮಾಲ್‌ನಲ್ಲಿ ಜಗತ್ತಿನ ಏಕೈಕ ತುಳು ಚಾವಡಿ ಸೇವಾರ್ಪಣೆ

Pinterest LinkedIn Tumblr

tulu_chavadi_baroda_1

ತುಳು ಭಾಷೆಗೆ ಇನ್ನೂ ಇತಿಹಾಸವಿದೆ:ಸಚಿವ ಪ್ರಮೋದ್ ಮಧ್ವರಾಜ್

ಬರೋಡ (ಗುಜರಾತ್), ಅ.12:   ಬರೋಡಾಕ್ಕೆ ಹೋಗಬೇಕಾ… ಬೇಡವೇ ಎನ್ನುವುದನ್ನು ಚಿಂತಿಸುತ್ತಿರುವಾಗ ಹೋಗುವುದೇ ಸರಿ ಅನ್ನಿಸಿ ಬಂದೇ ಬಿಟ್ಟೆ. ಕಾರಣ ದೂರದವರ ಪ್ರೀತಿ ಮೌಲ್ಯಯುತವಾಗಿದ್ದು ಸಾಮಿಪ್ಯರು ಸದಾ ಸಿಗುತ್ತಾರೆ ಎಂದಾಯಿತು. ನಿಜವಾಗಿಯೂ ಬಾರದಿದ್ದಾರೆ ಮಹಾ ತಪ್ಪು ಎಸಗಿದಂತಾಗಿತ್ತೋ ಏನೋ…? ತುಳು ಸಂಘ ಬರೋಡಾ ರಚಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾನುಸಾರ ಬದುಕು ಅನುಷ್ಠಾನ ಮಾಡಿತ್ತಿರುವ ನೀವುಗಳು ನಿಜವಾದ ತುಳುವರು. ತುಳು ಯಾವುದೇ ಜಾತಿ ಧರ್ಮದವರ ಆಸ್ತಿ ಅಲ್ಲ. ಕೊರಗ ಸಮುದಾಯದಿಂದ ಬ್ರಾಹ್ಮಣರ ವರೆಗೂ ಮಾತನಾಡುವ ಸಹೋದರತ್ವದ ಶ್ರೀಮಂತ ಭಾಷೆಯಾಗಿದೆ. ಪಂಚದ್ರಾವಿಡ ಭಾಷೆಗೆ ಸ್ಥಾನ ಸಿಕ್ಕಿದಾದರೆ ಅದು ತುಳುಕ್ಕಾಗಿ ಎನ್ನಬೇಕು. ಪುರಾತನ ಸಂಸ್ಕೃತಿ ಮೈಗೂಡಿಸಿ ಕೊಂಡ ತುಳು ಭಾಷೆಗೆ ಇನ್ನೂ ಇತಿಹಾಸ ರೂಪಿಸಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕ್ರೀಡಾ ಮತ್ತು ಯುವಜನ, ಮೀನುಗಾರಿಕಾ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ನುಡಿದರು.

ಗುಜರಾತ್ ರಾಜ್ಯದ ಬರೋಡಾ ಮಹಾನಗರದಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ ತುಳು ಸಂಘ ಬರೋಡಾ ನಿರ್ಮಿಸಿರುವ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿ ಲೋಕಾರ್ಪಣೆಗೈದು ಸಚಿವ ಮಧ್ವರಾಜ್ ಮಾತನಾಡಿದರು.

tulu_chavadi_baroda_2 tulu_chavadi_baroda_3 tulu_chavadi_baroda_4 tulu_chavadi_baroda_5

ಇಂದಿಲ್ಲಿ ಮಂಗಳವಾರ ಪೂರ್ವಾಹ್ನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಬಿಜೆಪಿ ಮುಂದಾಳು, ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ವಡೋದರ ಮಹಾನಗರ ಪಾಲಿಕೆಯ ಮೇಯರ್ ಭರತ್ ದಂಗೇರ್, ಸ್ಥಾನೀಯ ನಗರಸೇವಕ ಮನೀಷ್ ಪಗಾರ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಅಧ್ಯಕ್ಷ ನ್ಯಾ| ಹರೀಶ್ ಪೂಂಜಾ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಭವಾನಿ ಫೌಂಡೇಶನ್‌ನ ಸಂಸ್ಥಾಪಕ ದಡ್ದಂಗಡಿ ಚೆಲ್ಲಡ್ಕ ಕುಸುಮೋಧರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ), ಸೂರತ್‌ನ ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಹ ಸಂಪಾದಕ ಶ್ರೀನಿವಾಸ ಜೋಕಟ್ಟೆ, ಉದಯವಾಣಿ ಕನ್ನಡ ದೈನಿಕ ಮುಂಬಯಿ ಆವೃತ್ತಿಯ ಸಹ ಸಂಪಾದಕ ಡಾ| ದಿನೇಶ್ ಶೆಟ್ಟಿ ರೆಂಜಾಳ ಗೌರವ ಅತಿಥಿsಗಳಾಗಿ ಉಪಸ್ಥಿತರಿದ್ದರು.

ಶಾಸಕ ಸುನೀಲ್ ಕುಮಾರ್ ಮಾತನಾಡಿ ನಿಜಾರ್ಥದ ಸಂಸ್ಕೃತಿ ಬಿಂಬಿಸುವ ಬರೋಡಾ ತುಳುವರಿವರು. ಊರು ಮರೆಯದ ತುಳುವ ಪ್ರಿಯರು. ಇಲ್ಲಿ ತುಳುವಲ್ಲಿ ಮಾತನಾಡಿದರೆ ಅದೇ ಗೌರವ. ಇವರೆಲ್ಲರೂ ಒಗ್ಗೂಡಿ ತಮ್ಮ ನೆಲೆ, ಸಂಸ್ಕೃತಿ ಗೌರವಿಸುವ ಕೆಲಸ ಮಾಡುತ್ತಿದ್ದು ಇದು ತುಳುನಾಡಿನಲ್ಲೂ ಆಗಬೇಕಾಗಿದೆ. ಭಾಷಾ ಸಂಸ್ಕೃತಿ ಉಳಿವು ಮಾತೆಯರ ಹೊಣೆಯಾಗಿದ್ದು ಆ ಮೂಲಕ ತುಳುವಿಗೆ ಬಲತುಂಬಬೇಕಾಗಿದೆ ಎಂದರು.

tulu_chavadi_baroda_6 tulu_chavadi_baroda_7 tulu_chavadi_baroda_8 tulu_chavadi_baroda_9 tulu_chavadi_baroda_10

ಸಂಸ್ಕೃತಿ ಜೀವಂತವಾಗಿರಿಸುವುದು ಆದ್ಯ ಕರ್ತವ್ಯ. ಸಾಂಸ್ಕೃತಿಕ ನಗರಿಯಲ್ಲಿ ತುಳು ಸಂಸ್ಕೃತಿ ಮೆರೆಯುತ್ತಿರುವುದು ಅಭಿನಂದನೀಯ.ರಾಷ್ಟ್ರದ ಸಂಸ್ಕೃತಿ ರಾಜಧಾನಿ ಗುಜರಾತ್‌ನಲ್ಲಿ ತುಳು ಚಾವಡಿ ನಿರ್ಮಿಸಿ ಸಂಸ್ಕೃತಿ ಕಿರೀಟಕ್ಕೆ ವಜ್ರ ಮೇಳೈಸಿದಂತಿದೆ. ಭಾಷಾಭಿಮಾನಿ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯನ್ನು ಜೀವಂತವಾಗಿರಿಸುವು ಮುಂದಿನ ಪೀಳಿಗೆಗೆ ಮಾದರಿ ಆಗುತ್ತದೆ. ಮನದ ಸುಖ ಶಾಂತಿಗಾಗಿ ಭಾರತ ರಾಷ್ಟ್ರವು ವಿಶ್ವದ ಕೇಂದ್ರವಾಗಿದ್ದು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿಯೂ ಜಗತ್ತಿಗೆ ಮಾದರಿಯಾಗಿದೆ ಎಂದು ಮೇಯರ್ ಭರತ್ ತಿಳಿಸಿದರು.
ಜಾನಕಿ ಬ್ರಹ್ಮಾವರ ಅಧ್ಯಕ್ಷೀಯ ನುಡಿಗಳನ್ನಾಡಿ ಸ್ವಾರ್ಥರಹಿತ ಸೇವೆಯಿಂದ ಸಾರ್ಥಕತೆ ಸಾಧ್ಯ. ಇದನ್ನು ಈ ಸಂಘ ಕಾರ್ಯಗತ ಗೊಳಿಸಿ ನಮಗೆ ತಿಳಿಸಿದೆ. ಸಂಘದ ಅತಿಥಿ ಆದರಾತಿಥ್ಯ ಮತ್ತು ಮಹಿಳಾ ಗೌರವ ನನಗೆ ತುಬಾ ಸಂತುಷ್ಟ ತಂದಿದೆ. ತುಳು ಭಾಷೆಯೂ ಎಂದು ಸಾಯದು ಎನ್ನುವುದು ಸತ್ಯ. ಇದು ತುಳು ಸಂಘ ಬರೋದಾ ಸಾಬೀತು ಪಡಿಸಿದೆ. ಪರದೇಶ ರಾಜ್ಯಗಳಲ್ಲಿ ತುಳುವಿನ ಚಟುವಟಿಕೆಗಳು ದಿನನಿತ್ಯ ಹೆಚ್ಚುತ್ತಿದ್ದು ಮೊಬೈಲ್ ಬಳಕೆಯಲ್ಲೂ ತುಳು ವಿಸ್ಕೃತವಾಗುತ್ತಿದೆ. ತುಳುಮಾತೆ ಸರ್ವರಿಗೂ ಯಶ ತರಲಿ. ತುಳು ಶಕ್ತಿ ಭಕ್ತಿಯುತವಾಗಲಿ ಎಂದರು.

ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದ ಆಹ್ವಾನಿಸಿದ ಎಲ್ಲಾ ಅತಿಥಿsಗಳು ಸಮಯೋಚಿತವಾಗಿ ಆಗಮಿಸಿರುವ ಮೊತ್ತ ಮೊದಲ ವೈಶಿಷ್ಯಪೂರ್ಣ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ ಎನ್ನುವುದೇ ನಮ್ಮ ಹಿರಿಮೆ. ಪೂಜ್ಯ ಡಾ| ವಿರೇಂದ್ರ ಹೆಗ್ಗಡೆ ಅವರ ಅನುಗ್ರಹ ಚಾವಡಿಗೆ ಪ್ರೇರಕವಾಗಿದೆ. ನಾವು ಜಾತಿಮತ, ಪಂಥಬೇಧ ಮರೆತು ಹಳ್ಳಿಗರಂತೆ ಬಾಳುವ ತುಳುವರು. ಇಲ್ಲಿ ಸಾಮರಸ್ಯದಿಂದ ಜೀವನ ಕಳೆದು ತುಳುವನ್ನು ಬೆಳೆಸುತ್ತಿದ್ದೇವೆ. ಗುಜರಾತ್‌ನಾದ್ಯಂತದ ಸರ್ವರಿಗೂ ಈ ಚಾವಡಿ ಮುಕ್ತವಾಗಿದ್ದು ಆ ಮೂಲಕ ನಾವೆಲ್ಲರೂ ತುಳುನಾಡ ಮಕ್ಕಳಾಗಿ ದುಡಿಯೋಣ ಎಂದರು.

ವೇದಿಕೆಯಲ್ಲಿ ತುಳು ಸಂಘ ಬರೋಡಾ ಇದರ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಸಂಚಾಲಕ ಎಸ್.ಕೆ ಹಳೆಯಂಗಡಿ, ಮಾಜಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಮತ್ತಿತರರು ಆಸೀನರಾಗಿದ್ದರು. ಪ್ರಿಯಾಂಕಾ ಸುನೀಲ್ ಕುಮಾರ್, ಮಹಾವೀರ ಹೆಗ್ಡೆ, ವಿಖ್ಯಾತ್ ಶೆಟ್ಟಿ ಕಾರ್ಕಳ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಡಿ.ಎಂ.ಕುಲಾಲ್, ಮೋಹನ್ ಕೊಪ್ಪಲ ಕದ್ರಿ, ಸಂಗೀತಕಾರ ಗಣೇಶ್ ಎರ್ಮಾಳ್, ಪೂವಾರಿ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬರಬೈಲು, ಮೋಹನ್ ಕುಮಾರ್ ಸೂರತ್, ಶರತ್ ಶೆಟ್ಟಿ ಕಿನ್ನಿಗೋಳಿ ಇವರನ್ನು ಸಂಘದ ಉಪಾಧ್ಯಕ್ಷರುಗಳಾದ ಮಹಾವೀರ ಬಿ.ಜೈನ್ ಮತ್ತು ಕೆ.ಮಾಧವ ಶೆಟ್ಟಿ, ಮಹಿಳಾ ವಿಭಾಗದ ಮುಖ್ಯಸ್ಥೆ ಸುಜಾತಾ ಕೆ.ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ರೈ ಮತ್ತು ಪ್ರಶಾಂತ್ ಹೆಗ್ಡೆ, ಮಾಜಿ ಅಧ್ಯಕ್ಷ ಇಂದುದಾಸ್ ವಿ.ಶೆಟ್ಟಿ, ಸಂಘದ ಪ್ರಮುಖರಾದ ಮಧನ್ ಕುಮಾರ್ ಗೌಡ, ಎಸ್.ಕೆ ಶೆಟ್ಟಿ, ಪ್ರಭಾ ಸತೀಶ್ ಶೆಟ್ಟಿ, ಸುಧಾಕರ ಶೆಟ್ಟಿ, ಸುನೀಲ್ ಶೆಟ್ಟಿ, ದಯಾನಂದ ಸಾಲ್ಯಾನ್, ದಿನೇಶ್ ಶೆಟ್ಟಿ, ಯಶವಂತ್ ಶೆಟ್ಟಿ, ಕೊರಗಪ್ಪ ಶೆಟ್ಟಿ, ಅಜಿತ್‌ಕುಮಾರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸುರೇಶ್ ಕೆ.ಶೆಟ್ಟಿ ಸೇರಿದಂತೆ ಉಪಸ್ಥಿತ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕು| ವೈಷ್ಣವಿ ಡಿ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಕರ್ನೂರು ಮೋಹನ್ ರೈ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ವಂದನಾರ್ಪಣೆಗೈದರು.

ಗುಜರಾತ್‌ನಾದ್ಯಂತದ ವಿವಿಧ ತುಳು-ಕನ್ನಡ, ಬಂಟ-ಬಿಲ್ಲವ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಸದಸ್ಯರು ಹಾಜರಿದ್ದು ತುಳು ಸಂಪ್ರ್ರದಾಯಿಕ ತೆನೆ ಹಬ್ಬ (ಪುದ್ಧಾರ್)ವನ್ನೂ ಅದ್ದೂರಿಯಿಂದ ಆಚರಿಸಿದರು. ಮಹಿಳಾ ಮಂಡಳಿ ಭಜನೆ ಹಾಗೂ ಮಂಗಳಾರತಿಗೈದರು. ವಿಜಯ ದಶಮಿ ಶುಭಾವಸರದಲ್ಲಿ ದಿನಪೂರ್ತಿ ಜರುಗಿದ ಸಂಭ್ರಮದಲ್ಲಿ ಸಂಘದ ಸದಸ್ಯರು ಮತ್ತು ಮಕ್ಕಳು ವಿವಿಧ ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ವಿಜಯ ಕಲಾವಿದರು ಕಿನ್ನಿಗೋಳಿ ತಂಡವು `ಲೆಕ್ಕ ತತ್ತಿ ಬೊಕ್ಕ’ ತುಳು ನಾಟಕ ಪ್ರದರ್ಶಿಸಿದರು.

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

Comments are closed.