ಕರ್ನಾಟಕ

ಹಳದಿಹುಡಿ(ಅರಿಶಿನ)ದ ಉಪಯುಕ್ತ ಪ್ರಯೋಜನಗಳು.

Pinterest LinkedIn Tumblr

5turmeric

ಮಂಗಳೂರು: ನಮ್ಮ ದಿನನಿತ್ಯದ   ಆಹಾರ ತಯಾರಿಕೆಯಲ್ಲಿ ಬಳಸುವ ವಸ್ತುಗಳೂ ಕೂಡ ನಮ್ಮ ದೇಹಕ್ಕೆ ದಿವ್ಯೌಷಧವಾಗಿದೆ. ಅಡುಗೆ ಮನೆಯಲ್ಲಿ ಹೆಚ್ಚು ಬಳಕೆಯಾಗುವ ಕೆಲವೊಂದು ಪದಾರ್ಥಗಳು ನಮ್ಮ ದಿನನಿತ್ಯದ ಆರೋಗ್ಯಕ್ಕೆ ಸಹಕಾರಿ. ಇಂದು ನಾವಿಲ್ಲಿ ಅರಿಶಿನದ ಬಗೆಗೆ ಕೆಲವೊಂದು ಮಹತ್ವದ ಸಂಗತಿಯನ್ನು ಹೇಳುತ್ತಿದ್ದೇವೆ.  ಹೆಂಗಸರಿಗೆ ಅಡುಗೆ ಮನೆಯೇ ಒಂದು ರೀತಿಯ ಔಷದಾಲಯ. ಅರಿಶಿನದ ಪ್ರಯೋಜನಗಳನ್ನು ಅರಿತು ಇದರ ಬಳಕೆಯನ್ನು ಮಾಡ ಬಯಸುತ್ತಾರೆ.

ಅರಿಶಿನದ ಪ್ರಯೋಜನಗಳನ್ನು ಇಲ್ಲಿವೆ…

ಕರುಳಿನಲ್ಲಿನ ನಂಜನ್ನು ನಿವಾರಿಸಲು :
ಅರಿಶಿಣವು ಕರುಳಿನಲ್ಲಿನ ನಂಜನ್ನು ನಿವಾರಿಸಲು ಸಹಕರಿಸುತ್ತದೆ. ಇದು ಕರುಳಿನಲ್ಲಿರುವ ಹೆಪಾಟಿಕ್ ಕೋಶಗಳನ್ನು ಪುನಃಶ್ಚೇತನಗೊಳಿಸಿ, ಅವುಗಳಲ್ಲಿ ನಂಜಿನ ವಿರುದ್ಧ ಹೋರಾಡುವಂತಹ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತದೆ.

ಆಂಟಿ- ಆಕ್ಸಿಡೆಂಟ್:
ಅರಿಶಿಣದಲ್ಲಿ ಕುರ್ಕುಮಿನ್ ಎಂಬ ಪ್ರಧಾನ ಅಂಶವಿರುತ್ತದೆ. ಇದು ಗ್ಲುಟಾಥಿಯೋನ್ ಎಂಬ ಪರಿಣಾಮಕಾರಿ ಆಂಟಿ-ಆಕ್ಸಿಡೆಂಟ್ ಅನ್ನು ಉತ್ಪಾದಿಸುತ್ತದೆ. ಇದು ನಮ್ಮ ದೇಹದಲ್ಲಿನ ಫ್ರೀ ರಾಡಿಕಲ್ಸ್‌ಗಳ ವಿರುದ್ಧ ಹೋರಾಡಿ, ವಯಸ್ಸಾದಂತೆ ಬರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ನೋವು ನಿವಾರಕ;
ಅರಿಶಿಣ ಒಂದು ಅದ್ಭುತವಾದ ಪ್ರಾಕೃತಿಕ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿದೆ. ಸಂಧಿವಾತ, ವಾತರೋಗ, ಸ್ಕೆರೊಸಿಸ್ ಮತ್ತು ಕರುಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿವಾರಿಸಲು ಅರಿಶಿಣವನ್ನು ಬಳಸಲಾಗುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:
ಅರಿಶಿಣವು ಒಂದು ಅದ್ಭುತವಾದ ಜೀರ್ಣಶಕ್ತಿ ಪ್ರಚೋದಕ. ಹಾಗಾಗಿ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲ್ಲಾ ಗುಣಗಳ ಕಾರಣವಾಗಿ ಅರಿಶಿಣವು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮಸಾಲೆ ಪದಾರ್ಥವಾಗಿ ಗುರುತಿಸಿಕೊಂಡಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಇದನ್ನು ಬಳಸುವುದನ್ನು ಯಾವುದೇ ಕಾರಣಕ್ಕು ಮರೆಯಬೇಡಿ.

turmeric-face-mask

ತ್ವಚೆಯಲ್ಲಿ ಕಂಡುಬರುವ ಸುಕ್ಕು:
ಸುಕ್ಕುಗಳನ್ನು ನಿವಾರಿಸುವುದರಲ್ಲಿ ಸಹ ಅರಿಶಿನ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸ್ವಲ್ಪ ಅಕ್ಕಿಪುಡಿಯ ಜೊತೆಗೆ ಒಂದು ಚಮಚ ಅರಿಶಿನ ಪುಡಿಯನ್ನು ಬೆರೆಸಿಕೊಳ್ಳಿ. ಇದಕ್ಕೆ ಒಂದು ಚಮಚ ಟೊಮೇಟೊ ರಸ ಹಾಗು ಒಂದು ಚಮಚ ಹಾಲನ್ನು ಮಿಶ್ರಣ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖದಲ್ಲಿರುವ ಸುಕ್ಕುಗಳ ಮೇಲೆ ಲೇಪಿಸಿ. ನಂತರ ಇದನ್ನು 20 ನಿಮಿಷಗಳ ಕಾಲ ಬಿಟ್ಟು, ಬಿಸಿ ನೀರಿನಿಂದ ತೊಳೆಯಿರಿ. ಈ ಪರಿಹಾರವನ್ನು ವಾರಕ್ಕೊಮ್ಮೆ ಮಾಡಿ. ಆಗ ನೋಡಿ, ನಿಮ್ಮ ಸುಕ್ಕಿಗೆ ಪರಿಹಾರ ದೊರೆಯಿತೆ ಇಲ್ಲವೇ, ಎಂದು.

trumaric_milk_photo_2

ಅರಿಶಿನಪುಡಿಯುಕ್ತ ಹಾಲು;
ಹಾಲಿನೊ೦ದಿಗೆ ಅರಿಶಿನದ ಪುಡಿಯನ್ನು ಬೆರೆಸಿಕೊ೦ಡು ಕುಡಿಯುವುದರಿ೦ದ ಹಲವಾರು ಪ್ರಯೋಜನಗಳಿವೆ. ಬಿಸಿ ಹಾಲಿಗೆ ಅರಿಶಿನದ ಪುಡಿಯನ್ನು ಬೆರೆಸುವುದರ ಮೂಲಕ ಅರಿಶಿನ ಪುಡಿಯ ಸ೦ಪೂರ್ಣ ಗುಣಕಾರಕ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಪೇಯವು ದೇಹದ ಮೇಲಿರಬಹುದಾದ ಗಾಯಗಳು ಹಾಗೂ ಬಿರುಕುಗಳನ್ನೂ ಕೂಡಾ ಗುಣಪಡಿಸಬಲ್ಲದು. ಜೊತೆಗೆ, ಅರಿಶಿನಪುಡಿಯ ಹಾಲು ಶರೀರದ ಆ೦ತರಿಕ ಉರಿಯನ್ನೂ ಹಾಗೂ ಸೋ೦ಕುಗಳನ್ನೂ ಗುಣಪಡಿಸಬಲ್ಲದು. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಗಾಯಗಳಿಗಾಗಿ ಹಾಗೂ ಬಿರುಕುಗಳಿಗಾಗಿ;
ತ್ವಚೆಗೆ ಸ೦ಬ೦ಧಿಸಿದ ಹಾಗೆ ಅರಿಶಿನದ ಪುಡಿಯಿ೦ದಾಗುವ ಪ್ರಯೋಜನಗಳು ಒ೦ದೇ, ಎರಡೇ?! ಬಿರುಕು ಅಥವಾ ಗಾಯವಾದಾಗ ಕ್ರಮೇಣ ಅದು ಸೋ೦ಕಿಗೀಡಾಗಬಲ್ಲದು ಹಾಗೂ ಇದು ಕೀವಿನ ಸ೦ಚಯನಕ್ಕೆ ದಾರಿಮಾಡಿಕೊಡಬಲ್ಲದು. ಅರಿಶಿನದ ಪುಡಿಯನ್ನು ನೀರಿಗೆ ಸೇರಿಸಿ ಪೇಸ್ಟ್ ಅನ್ನು ಸಿದ್ಧಪಡಿಸಿರಿ. ಈ ಪೇಸ್ಟ್ ಅನ್ನು ಬಾಧಿತ ಜಾಗಕ್ಕೆ ನೇರವಾಗಿ ಹಚ್ಚಿಕೊಳ್ಳುವುದರ ಮೂಲಕ ಸೋ೦ಕನ್ನು ಹಾಗೂ ಉರಿಯನ್ನು ಶಮನಗೊಳಿಸಿಕೊಳ್ಳಬಹುದು.

Comments are closed.