ಮುಂಬೈ

ಮನೆ ಬಾಗಿಲಿಗೆ ಜಿಯೋ ಸಿಮ್

Pinterest LinkedIn Tumblr

jio-sim-card

ಮುಂಬೈ(ಸೆ.27): ಮಾರುಕಟ್ಟೆಯಲ್ಲಿ ಉಚಿತ ಕೊಡುಗೆಗಳ ಮಹಾಪೂರವನ್ನೇ ಹರಿಸಿ ಅತೀ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿರುವ ರಿಲಯನ್ಸ್ ಜಿಯೋ ಸಿಮ್ ಕಾರ್ಡ್’ಗೆ ಗ್ರಾಹಕರು ಕ್ಯೂ ನಿಂತಿದ್ದಾರೆ.

ಸರಿಯಾದ ಸಮಯಕ್ಕೆ ಸಿಮ್ ದೊರಕದ ಹಿನ್ನಲೆಯಲ್ಲಿ ಅಂಗಡಿಗಳ ಮುಂದೆ ಗ್ರಾಹಕರು ಕ್ಯೂ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸಿಮ್ ಸಿಗುತ್ತಿಲ್ಲ ಎನ್ನುವ ಗ್ರಾಹಕರ ದೂರು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಸದ್ಯ ರಿಲಯನ್ಸ್ ಡಿಜಿಟಲ್ ಸ್ಟೋರಿ ಮತ್ತು ಎಕ್ಸ್ ಪ್ರೆಸ್ ಮಿನಿ ಸ್ಟೋರ್ ಗಳಲ್ಲಿ ಜಿಯೋ ಸಿಮ್ ಲಭ್ಯವಾಗಿದ್ದು, ಇದರಿಂದಾಗಿ ಗ್ರಾಹಕರು ಇಲ್ಲಿ ಜಿಯೋ ಸಿಮ್ ಖರೀದಿಗೆ ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಸೂಚಿಸುವ ಸಲುವಾಗಿ ಸಿಮ್ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡುವ ಸಲುವಾಗಿ ಜಿಯೋ ಮತ್ತೊಂದು ಸಾಹಸಕ್ಕೆ ಮುಂದಾಗಿದೆ.

ಗ್ರಾಹಕರ ಟೈಮ್ ಉಳಿಸುವ ಮತ್ತು ಗ್ರಾಹಕರ ಮನೆ ಬಾಗಿಲಿಗೆ ಸಿಮ್ ಕಾರ್ಡ್ ತಲುಪಿಸುವ ಸಲುವಾಗಿ ಆನ್ ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಅನ್ವಯ ಗ್ರಾಹಕರು ಸಿಮ್ ಬುಕ್ ಮಾಡಿದರೆ 5ರಿಂದ 7 ದಿನಗಳ ಒಳಗೆ ರಿಲಯನ್ಸ್ ತನ್ನ ಗ್ರಾಹಕರಿಗೆ ಸಿಮ್ ಕಾರ್ಡ್ ತಲುಪಿಸಲಿದೆ. ಗ್ರಾಹಕರು ಜಿಯೋ ಅಫಿಷಲ್ ವೆಬ್ ಸೈಟಿನಲ್ಲಿ ಸಿಮ್ ಕಾರ್ಡ್ ಬುಕ್ ಮಾಡಬಹುದಾಗಿದೆ.

Comments are closed.