ಕರ್ನಾಟಕ

ಸಂವಿಧಾನ ಹೇಳ್ತಾ ಇದೆ ಅಂತ ನೀರ್ ಬಿಡ್ತೀವಿ ಅನ್ನಕಾಗುತ್ತಾ?: ಈಶ್ವರಪ್ಪ

Pinterest LinkedIn Tumblr

eshwarappa

ಬೆಂಗಳೂರು, ಸೆ. ೨೮- ತಮಿಳುನಾಡಿಗೆ ಈ ತಿಂಗಳ 30ರ ವರೆಗೆ ಕಾವೇರಿ ನೀರು ಬಿಡುಗಡೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, `ಬದುಕ್ಕಿದ್ದರೆ ಸಂವಿಧಾನ, ಸತ್ತರೆ ಯಾವ ಸಂವಿಧಾನ? ಸಂವಿಧಾನ ಹೇಳ್ತಾ ಇದೆ ಅಂತ ನೀರ್ ಬಿಡ್ತೀವಿ ಅನ್ನಕಾಗುತ್ತಾ? ಕುಡಿಯೋಕೆ ನೀರಿಲ್ಲದಾಗ ಬಿಡ‌ಕಾಗುತ್ತಾ?’ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾಶಯಗಳಲ್ಲಿರುವ ನೀರನ್ನು ಕುಡಿಯಲಿಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲಾಗುವುದು ಎಂಬ ವಿಧಾನ ಮಂಡಲದ ಸರ್ವಾನುಮತದ ನಿರ್ಣಯಕ್ಕೆ ತಾವೂ ಬದ್ಧರಾಗಿರುವುದಾಗಿ ತಿಳಿಸಿದರು.

ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು. ರಾಜ್ಯದ ವಿರುದ್ಧವಾಗಿಯೇ ಸುಪ್ರೀಂ ಕೋರ್ಟ್ ಆದೇಶ ಬರುತ್ತಿದೆ. ಈ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇರುತ್ತದೆ. ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು

Comments are closed.