ಮುಂಬೈ

ಆಗಸ್ಟ್ 9 ರಂದು ತಮ್ಮ ಕೊನೆಯ ಹಣಕಾಸು ನೀತಿ ಪ್ರಕಟಿಸಲಿರುವ ರಘುರಾಮ್ ರಾಜನ್

Pinterest LinkedIn Tumblr

raghu-ram-rajan-1ಮುಂಬೈ: ಆಗಸ್ಟ್ 9 ರಂದು ಆರ್ ಬಿಐ ನ ಹಣಕಾಸು ನೀತಿ ಪ್ರಕಟವಾಗಲಿದ್ದು, ಇದು ಆರ್ ಬಿಐ ನ ಹಾಲಿ ಗೌರ್ನರ್ ರಘುರಾಮ್ ರಾಜನ್ ಅವರು ಮಂಡಿಸಲಿರುವ ಕೊನೆಯ ಹಣಕಾಸು ನೀತಿ ಆಗಿರಲಿದೆ.

ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಿಗೆ ಹಣದುಬ್ಬರ ಗುರಿಯನ್ನು ಪ್ರಕಟಿಸಿದ ನಂತರ ಆರ್ ಬಿಐ ನ ಹಣಕಾಸು ನೀತಿ ಪ್ರಕಟವಾಗುತ್ತಿದ್ದು, ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ತಮ್ಮ ಕೊನೆಯ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದಾರೆ.

ಈ ವರೆಗೂ ಹಣಕಾಸು ನೀತಿಗಳನ್ನು ಮೂರೂ ಬಾರಿ ಏರಿಕೆ ಮಾಡಿ, ಐದು ಬಾರಿ ಕಡಿತಗೊಳಿಸಿರುವ ರಘುರಾಮ್ ರಾಜನ್ ಅವರ ಕಾರ್ಯಾವಧಿ ಅವಧಿ ಸೆ.4 ಕ್ಕೆ ಅಂತ್ಯವಾಗಲಿದೆ. ಆರ್ ಬಿಐ ಗೌರ್ನರ್ ಹುದ್ದೆಯ ಅವಧಿ ಮುಕ್ತಾಯಗೊಳ್ಳಲಿದ್ದು, ರಘುರಾಮ್ ರಾಜನ್ ಯುನಿವರ್ಸಿಟಿ ಆಫ್ ಚಿಕಾಗೊ ನಲ್ಲಿ ಪ್ರಾಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಕೆಲಸಕ್ಕೆ ಮರಳಲಿದ್ದಾರೆ.

Comments are closed.