ರಾಷ್ಟ್ರೀಯ

ನಕಲಿ ಗೋರಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳಿ: ರಾಜ್ಯಗಳಿಗೆ ಪ್ರಧಾನಿ ಕರೆ

Pinterest LinkedIn Tumblr

pmmodi13ಗಜ್ವೆಲ್: ನಕಲಿ ಗೋರಕ್ಷಕರು ದೇಶವನ್ನು ಹಾಳು ಮಾಡುತ್ತಿದ್ದು, ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯ ಸರ್ಕಾರಗಳಿಗೆ ಕರೆ ನೀಡಿದ್ದಾರೆ.

ಗೋರಕ್ಷಣೆ ಹೆಸರಿನಲ್ಲಿ ದಲಿತರು ಹಾಗೂ ಇತರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಕೆಲ ಸ್ವಯಂ ಘೋಷಿತ ನಕಲಿ ಗೋರಕ್ಷಕರನ್ನು ಶಿಕ್ಷಿಸಿ. ಅವರು ಸಾಮಾಜಿಕ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎಂದು ಮತ್ತೆ ಕರೆ ನೀಡಿದ್ದಾರೆ.

ನಿನ್ನೆಯಷ್ಟೇ ನಕಲಿ ಗೋ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದಿದ್ದ ಮೋದಿ, ಇಂದು ಮತ್ತೆ ಖಡಕ್ಕಾಗಿ ರಾಜ್ಯಗಳಿಗೆ ಸೂಚಿಸಿದ್ದಾರೆ.

ತೆಲಂಗಾಣದ ಮೇದಕ್ ಜಿಲ್ಲೆಯ ಗಜ್ವೆಲ್ ನಲ್ಲಿ ಮಿಷನ್ ಭಗಿರತ ಎಂಬ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಭಾರತ ವಿಭಿನ್ನತೆಯಿಂದ ಕೂಡಿದ ದೇಶ. ವಿಭಿನ್ನ ಮೌಲ್ಯಗಳು ಹಾಗೂ ಸಂಪ್ರದಾಯಗಳು ದೇಶದ ಏಕತೆಯನ್ನು ಕಾಪಾಡುತ್ತಿವೆ ಎಂದರು.

ನಾನು ನಿಜವಾದ ಗೋರಕ್ಷಕರನ್ನು ಮತ್ತು ಗೋ ಸೇವಕರನ್ನು ಗೌರವಿಸುತ್ತೇನೆ. ಆದರೆ ನಕಲಿ ಗೋರಕ್ಷಕರು ಸಮಾಜದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಅಂಥವರನ್ನು ಗುರುತಿಸಿ, ಶಿಕ್ಷೆಗೆ ಒಳಪಡಿಸಿ ಎಂದು ಪ್ರಧಾನಿ ಕರೆ ನೀಡಿದರು.

ಕಳೆದ ಜುಲೈ 11ರಂದು ಗುಜರಾತ್ ನ ಉನಾದಲ್ಲಿ ಹಸುವನ್ನು ಕೊಂದು ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ಗೋ ರಕ್ಷಕರು ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವ್ಯಾಪಕ ಟೀಕೆ ಎದುರಿಸುತ್ತಿದೆ.

Comments are closed.