ಮುಂಬೈ: ಬಾಲಿವುಡ್‍ನಲ್ಲಿ ವಾಂಟೆಡ್ ನಂತರ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ/ನಟ ಪ್ರಭುದೇವ ಮತ್ತೆ ತೆರೆಮೇಲೆ ಒಟ್ಟಾಗಿ ಚಿತ್ರವನ್ನ ತರುವ ಯೋಜನೆ ಮಾಡಿದ್ದಾರೆ.
ಬರೋಬ್ಬರಿ 7 ವರ್ಷಗಳ ನಂತರ ಇವರಿಬ್ಬರು ಚಿತ್ರವನ್ನ ಮಾಡಲಿದ್ದು, ವಾಂಟೆಡ್ ಚಿತ್ರದ ಬಳಿಕ ಪ್ರಭುದೇವ್ ವಿಶೇಷವಾಗಿ ಸಲ್ಮಾನ್ ಖಾನ್‍ಗಾಗಿಯೇ ಸ್ಟೋರಿಯೊಂದನ್ನ ತಯಾರಿಸಿದ್ದು, ಸಲ್ಲು ಒಪ್ಪಿಕೊಂಡರೇ ಸಲ್ಲು ಪ್ರಭು ಕಾಂಬಿನೇಷನ್‍ನಲ್ಲಿ ಎರಡನೇ ಚಿತ್ರ ಮೂಡಿಬರಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಭುದೇವ್ ಸಲ್ಮಾನ್ ಖಾನ್ ಸರ್ ಜೊತೆ ಕೆಲಸ ಮಾಡುವುದು ಕೇವಲ ಚಿತ್ರ ಮಾಡಿದ ರೀತಿ ಅನಿಸೋದಿಲ್ಲ, ಏನೂ ಚಮತ್ಕಾರ ಮಾಡಿದಂತೆ ಆಗುತ್ತದೆ. ಅದಕ್ಕೆ ಅವರ ಡೇಟ್ಸ್‍ಗಾಗಿ ಕಾಯಬೇಕು. ವಾಂಟೆಡ್ ಸಿನಿಮಾ ನನ್ನ ವೃತ್ತಿಯಲ್ಲಿ ಬಹುಮುಖ್ಯವಾಗಿದೆ ಯಾಕಂದ್ರೆ ನಾನು ಬಾಲಿವುಡ್‍ಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದೆ. ಅಲ್ಲದೇ ಸಲ್ಮಾನ್ ಖಾನ್ ಸರ್ ಆಕ್ಷನ್ ಮುಖವನ್ನ ಈ ಚಿತ್ರ ತೋರಿಸಿದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಅವರ ಜೊತೆಗೆ ಮುಂದಿನ ಚಿತ್ರ ತಯಾರಿ ನಡೆಸುತ್ತಿದ್ದು, ಈ ಚಿತ್ರದಲ್ಲಿ ಭರಪೂರ ಆಕ್ಷನ್‍ಗಳು ಅಭಿಮಾನಿಗಳು ಸಿಗುವುದಂತೂ ಗ್ಯಾರಂಟಿ ಎಂದು ಪ್ರಭುದೇವ್ ತಿಳಿಸಿದ್ದಾರೆ.
Comments are closed.