ಅಂತರಾಷ್ಟ್ರೀಯ

ಪೋಕೆಮನ್ ಗೋ ಆಟಕ್ಕಾಗಿಯೇ ಶಿಕ್ಷಕ ವೃತ್ತಿಯನ್ನೇ ತ್ಯಜಿಸಿದ 26 ವರ್ಷದ ಮಹಿಳೆ !

Pinterest LinkedIn Tumblr

pokemon

ಲಂಡನ್: ವಿಶ್ವದ ಗೇಮಿಂಗ್ ಲೋಕದಲ್ಲಿ ಹೊಸ ಭಾಷ್ಯವನ್ನೇ ಬರೆಯುತ್ತಿರುವ ‘ಗೋ ಪೋಕೆಮನ್’ ಆಟವನ್ನು ಚಟವಾಗಿ ಅಂಟಿಸಿಕೊಂಡವರ ಸಂಖ್ಯೆಯೇನು ಕಮ್ಮಿ ಇಲ್ಲ. ಹೀಗೇ ಪೋಕೆಮನ್ ಗೋ ಆಟವಾಡಲೆಂದೇ ಲಂಡನ್’ನಲ್ಲಿ 26 ವರ್ಷದ ಮಹಿಳೆಯೊಬ್ಬರು ಶಿಕ್ಷಕ ವೃತ್ತಿಯನ್ನೇ ತ್ಯಜಿಸಿದ್ದಾರೆ.

ಆದರೆ ಇವರು ಬೇರೆಯವರಂತೆ ಆಟವಾಗಿ ಸಮಯ ಕಳಿಯುತ್ತಿಲ್ಲ, ಈ ಆಟದಿಂದ ಸಾಕಷ್ಟು ಹಣ ಮಾಡಬಹುದು ಎಂಬುದು ಅವರ ವಾದ. ಶಿಕ್ಷಕಿ ಸೋಫಿಯಾ ಪೆಡ್ರಾಜ್ಜಾ ಅವರು ಪೋಕೆಮನ್ನನ್ನು ಪತ್ತೆ ಹಚ್ಚುತ್ತಾ ವಿವಿಧ ಸ್ಥಳಗಳಿಗೆ ಹೋಗಿ ಅವುಗಳನ್ನು ಸಂಗ್ರಹಿಸಿ, ಇ-ಬೇ ಮೂಲಕ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರಂತೆ.

ಪೋಕೆಮನ್ ಹುಡುಕಲು ಸಾಧ್ಯವಾಗದಿರುವವರು ಈ ಪಾತ್ರಗಳನ್ನು ಕೊಂಡುಕೊಳ್ಳುತ್ತಾರೆ. ಈ ವಹಿವಾಟಿನಿಂದ ಈಗಾಗಲೇ ಸಾವಿರಾರು ಪೌಂಡ್ ಗಳಿಸಿದ್ದಾರೆ ಪೆಡ್ರಾಜ್ಜಾ.

‘‘ನಾನು ಇನ್ನೂ ಎರಡೂ ಮೊಬೈಲ್ಗಳನ್ನು ಖರೀದಿಸಿ ಎರಡು ಖಾತೆಯಿಂದ ಪೋಕ್ಮನ್ಗಳನ್ನು ಹುಡುಕಿ ಹಣ ಗಳಿಸಲು ಚಿಂತಿಸಿದ್ದೇನೆ. ಆಟದ ಕ್ರೇಜ್ ಕಡಿಮೆಯಾಗುತ್ತಿದ್ದಂತೆ ಮತ್ತೆ ಶಿಕ್ಷಕ ವೃತ್ತಿಗೆ ಮರಳುತ್ತೇನೆ,’’ ಎಂದಿದ್ದಾರೆ ಪೆಡ್ರಾಜ್ಜಾ.

Comments are closed.