ಮುಂಬಯಿ: ಮೊಬೈಲ್ನಲ್ಲಿ ಪೋಕೆಮಾನ್ ಗೋ ಗೇಮ್ ಆಡಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುವವರಿಗೆ ಪೊಲೀಸರು ಕಠಿನ ಎಚ್ಚರಿಕೆ ನೀಡಿದ್ದಾರೆ. ಟ್ವಿಟ್ಟರ್ನಲ್ಲಿ ಈ ಕುರಿತು ಪ್ರಕಟನೆ ನೀಡಿರುವ ಪೊಲೀಸರು ರಸ್ತೆಯಲ್ಲಿ ಪೋಕೆಮಾನ್ ಹಿಡಿಯಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಜೀವನ ಎನ್ನುವುದು ಆಟವಲ್ಲ. ಅದರಲ್ಲೂ ರಸ್ತೆಯಲ್ಲಿ ಆಟವಾಡಿ ಕಳೆದುಕೊಳ್ಳುವಂತಹ ಅಗ್ಗದ ವಸ್ತುವಲ್ಲ ಪ್ರಾಣ. ನೀವು ರಸ್ತೆಯಲ್ಲಿ ಪೋಕೆಮಾನ್ ಗೋ ಹಿಡಿಯಲು ಪ್ರಯತ್ನಿಸಿದರೆ ನಾವು ನಿಮ್ಮನ್ನು ಹಿಡಿಯುತ್ತೇವೆ. ನಿಮ್ಮಿಂದಾಗಿ ವಾಹನ ಸವಾರರಿಗೆ ತೊಂದರೆಯಾಗಬಾರದು ಎಂದಿದ್ದಾರೆ. ಹೀಗಾಗಿ ಜನರು ನಮ್ಮ ಜತೆಗೆ ಸಹಕರಿಸಬೇಕು. ವಾಹನ ನಿಬಿಡ ರಸ್ತೆ ಪೋಕೆಮಾನ್ ಗೋ ಗೇಮ್ ಆಡಲು ಸೂಕ್ತ ಸ್ಥಳವಲ್ಲ. ಪೋಕೆಮಾನ್ ಆಡುವವರು ಪರಸ್ಪರ ಢಿಕ್ಕಿ ಹೊಡೆದು ಬಿದ್ದಿರುವ ಹಲವು ಪ್ರಕರಣಗಳು ವರದಿಯಾಗಿವೆ ಎಂದು ಪೊಲೀಸ್ ವಕ್ತಾರ ಅಶೋಕ್ ದುಧೆ ಹೇಳಿದ್ದಾರೆ.
-ಉದಯವಾಣಿ
Comments are closed.