ಮುಂಬೈ: ಕಾರೊಂದು ಮುಂಬೈ-ಪುಣೆ ಹೆದ್ದಾರಿಯಯಲ್ಲಿ ಮಂಗಳವಾರ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತಕ್ಕೀಡಾಗಿದ್ದು, ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಪುಣೆಯ ಕಾಂಶೆಟ್ ಸುರಂಗ ಬಳಿ ನಡೆದ ಈ ದುರ್ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಪುಣೆಯಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬುವುದಾಗಿ ವರದಿಯಾಗಿದೆ.
ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮೋಟಾರು ಬೈಕ್ ಸವಾರನೊಬ್ಬ ತಿಳಿಸಿದ್ದಾರೆ.
ಪೊಲಿಸ್ ವರದಿಗಳ ಪ್ರಕಾರ, ಪ್ರಯಾಣ ಹೊರಟ ವಿದ್ಯಾರ್ಥಿಗಳೆಲ್ಲರು ಸುಮಾರು 21 ರಿಂದ 23 ವಯಸ್ಸಿನವರಾಗಿದ್ದಾರೆ. ಇವರೆಲ್ಲರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ವೇಗದ ಚಾಲನೆ ಹಾಗೂ ಅಜಾಗರೂಕತೆಯಿಂದ ಕಾರು ರಸ್ತೆಯ ಡಿವೈಡರ್ ಗೆ ಗುದ್ದಿದ ಪರಿಣಾಮ ಕಾರು 200 ಅಡಿ ಆಳಕ್ಕೆ ಬಿದ್ದಿದೆ. ಪರಿಣಾಮ ಆರು ಮಂದಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಕಾಲೇಜು ಐಡಿಯಿಂದಾಗಿ ಸ್ಥಳಿಯರು ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ. ಮೃತ ಮೂವರು ಆದಿತ್ಯ ಭಂಡಾರ್ಕರ್, ಯಶ್ ಶಿರಾಲಿ ಹಾಗೂ ಅಭಿಷೇಕ ಎಂದು ತಿಳಿದು ಬಂದಿರುವುದಾಗಿ ವರದಿಯಾಗಿದೆ.
Comments are closed.