ಲಿಂಗದೇವರು ಲಂಡನ್ ಮತ್ತು ಬರ್ಮಿಂಗ್‌ಹ್ಯಾಮಿಗೆ ಹೋಗಿ ಬಂದಿದ್ದಾರೆ. ಅವರನ್ನು ಕರೆಸಿರುವುದು ಬ್ರಿಟಿಷ್ ಫಿಲ್ಮ್ ಇನ್ ಸ್ಟಿಟ್ಯೂಟ್. ಲಂಡನ್ ಮತ್ತು ಬರ್ಮಿಂಗ್ ಹ್ಯಾಮಲ್ಲಿ ಲಿಂಗದೇವರು ನಿರ್ದೇಶನದ ನಾನು ಅವನಲ್ಲ ಅವಳು ಚಿತ್ರದ ಪ್ರದರ್ಶನವೂ ನಡೆದಿದೆ. ಲಿಂಗದೇವರ ಪ್ರಕಾರ ಅದು ಅವರು ನೋಡಿರುವ ಅತ್ಯುತ್ತಮ ಚಿತ್ರೋತ್ಸವ.
ನಿರ್ದೇಶಕರೊಂದಿಗೆ ಚರ್ಚೆ, ಸಿನಿಮಾ ವ್ಯಾಪಾರ, ಸಿನಿಮಾದ ಬಗ್ಗೆ ನಿಜವಾದ ಕಾಳಜಿ ಮತ್ತು ಪ್ರೀತಿ ಇರುವ ಆ ಪ್ರದರ್ಶನದ ನಂತರ, ಅನಿವಾಸಿ ಭಾರತೀಯರು ಲಿಂಗದೇವರನ್ನು ಸನ್ಮಾನಿಸಿದ್ದೂ ಆಗಿದೆ. ಆದರೆ ಅವೆಲ್ಲಕ್ಕಿಂತ ಸಂತೋಷಕೊಟ್ಟದ್ದು ಬ್ರಿಟಿಷ್ ಫಿಲ್ಮ್ ಇನ್‌ಸ್ಟಿಟ್ಯೂಟ್ ಅವರ ಚಿತ್ರವನ್ನು ತನ್ನ ಸಿನಿಮಾ ಲೈಬ್ರರಿಗೆ ಸೇರಿಸಿಕೊಂಡದ್ದು. ಇದೀಗ ಬಿಎಫ್ಐ ಸದಸ್ಯರೆಲ್ಲರೂ ನಾನು ಅವನಲ್ಲ ಅವಳು ಚಿತ್ರವನ್ನು ನೋಡಬಹುದು. ಸಿನಿಮಾ ನೋಡುವುದಕ್ಕೆ ಒಂದು ಮೊತ್ತವನ್ನು ಬಿಎಫ್ಐ ನಿಗದಿ ಮಾಡುತ್ತದೆ. ಆ ಮೊತ್ತವನ್ನು ತುಂಬಿದರೆ ಸಿನಿಮಾ ನಿಮ್ಮ ಕಂಪ್ಯೂಟರಿನಲ್ಲಿ ನೋಡಲು ಸಿಗುತ್ತದೆ. ಹೀಗೆ ಬಿಎಪ್‌ಐ ಲೈಬ್ರರಿ ಸೇರಿದ ಮೊದಲ ಕನ್ನಡ ಸಿನಿಮಾ.
-ಉದಯವಾಣಿ
Comments are closed.