ಮನೋರಂಜನೆ

ವಿಂಡೀಸ್ ಬೌಲರ್‌‍ಗಳನ್ನು ಎದುರಿಸಲು ಗವಾಸ್ಕರ್‌ಗೆ ಬೇಕಿತ್ತು ಗ್ಲುಕೋಸ್ ಬಿಸ್ಕತ್ತುಗಳು

Pinterest LinkedIn Tumblr

gavaಮುಂಬೈ: ಸರ್ವಕಾಲಿಕ ಶ್ರೇಷ್ಟ ವೆಸ್ಟ್ ಇಂಡೀಸ್ ಬೌಲರುಗಳನ್ನು ಸುನಿಲ್ ಗವಾಸ್ಕರ್ ರಕ್ಷಣಾತ್ಮಕವಾಗಿ ಎದುರಿಸುವುದಕ್ಕೆ ಗ್ಲುಕೋಸ್ ಬಿಸ್ಕತ್ತು ನೆರವಾಗುತ್ತಿತ್ತಂತೆ. ಭಾನುವಾರ 67 ವರ್ಷ ತುಂಬಿದ ಮಾಜಿ ಓಪನಿಂಗ್ ಬ್ಯಾಟ್ಸ್‌ಮನ್‌ಗೆ ಇದ್ದ ಒಂದು ದೌರ್ಬಲ್ಯವೆಂದರೆ ಆಮ್ಚಿ ಮುಂಬೈನ ಗ್ಲುಕೋಸ್ ಬಿಸ್ಕತ್‌ಗಳನ್ನು ತಿನ್ನುವುದು. ಲೆಜೆಂಡ್ಸ್ ಕ್ಲಬ್ ಗವಾಸ್ಕರ್ ಹುಟ್ಟುಹಬ್ಬದ ಸಂಕೇತವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಗವಾಸ್ಕರ್ ಅವರ ಕಿರಿಯ ಸಹೋದರಿ ನೂತನ್ ಈ ವಿಷಯ ಬಹಿರಂಗ ಮಾಡಿದ್ದಾರೆ. ಗವಾಸ್ಕರ್ ಪಾರ್ಲೆ ಜಿ ಗ್ಲುಕೋಸ್ ಬಿಸ್ಕತ್‌ಗಳನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದರು ಎಂದು ನೂತನ್ ಹೇಳಿದರು.

ವೆಸ್ಟ್ ಇಂಡೀಸ್ ಪ್ರವಾಸ ಸುದೀರ್ಘ ಪ್ರವಾಸವಾಗಿದ್ದು, ಅವರು ಚಹಾ ಅಥವಾ ಕಾಫಿಯ ಜತೆ ಬಿಸ್ಕಿಟ್ ಅದ್ದಿ ತಿನ್ನಲು ಇಷ್ಟಪಡುತ್ತಿದ್ದರು. ಆದ್ದರಿಂದ ಅಲ್ಲಿಗೆ ಹೋಗುವವರ ಕೈಯಲ್ಲಿ ನಾವು ಬಿಸ್ಕತ್ ಪ್ಯಾಕೆಟ್ ಕೊಟ್ಟು ಕಳಿಸುತ್ತಿದ್ದೆವು ಎಂದು ನೂತನ್ ಗವಾಸ್ಕರ್ ತಿಳಿಸಿದರು.

ಪ್ರವಾಸಕ್ಕೆ ಮುಂಚೆ ಅವರು ಬಿಸ್ಕತ್ ಪೊಟ್ಟಣ ಒಯ್ದರೂ ಕೂಡ ಮೂರು ವಾರ ಅಥವಾ ಒಂದು ತಿಂಗಳಿನಲ್ಲಿ ಖರ್ಚಾಗುತ್ತಿತ್ತು. ಅಲ್ಲಿಗೆ ಯಾರೇ ಪ್ರಯಾಣಿಸಿದರೂ , ಕೆಲವು ಪತ್ರಕರ್ತರು ಅಥವಾ ಬಂಧುಗಳು, ಸ್ನೇಹಿತರ ಮೂಲಕ ಗವಾಸ್ಕರ್‌ಗೆ ಬಿಸ್ಕತ್ತು ಪ್ಯಾಕೆಟ್ ಕೊಟ್ಟು ಕಳಿಸುತ್ತಿದ್ದೆವು ಎಂದು ನೂತನ್ ವಿವರಿಸಿದರು.

ಭಾರತದ ಮಾಜಿ ಕ್ರಿಕೆಟರ್ ಮಾಧವ್ ಆಪ್ಟೆ ಮತ್ತು ಮುಂಬೈ ಕ್ರಿಕೆಟರ್ ವಾಸುದೇವ್ ಪರಂಜಪೆ ಗವಾಸ್ಕರ್ ಕುರಿತ ತಮ್ಮ ನೆನಪುಗಳನ್ನು ಹಂಚಿಕೊಂಡರು. ರವಿ ಶಾಸ್ತ್ರಿ ಮನೆಯಲ್ಲಿ ಕೆಲವು ಚಾರಿಟಿ ಪಂದ್ಯಾವಳಿ ವೇಳೆಯಲ್ಲಿ ಎಲ್ಲಾ ವೇಗದ ಬೌಲರುಗಳು ಬಿಯರ್ ಸೇವನೆಗಾಗಿ ಸೇರುತ್ತಿದ್ದರು. ಸನ್ನಿ ಅಲ್ಲಿಗೆ ಪೈಜಾಮಾ ಕುರ್ತಾ ಧರಿಸಿ ಆಗಮಿಸಿದ ಕೂಡಲೇ ಎಲ್ಲಾ ನಾಲ್ವರು ಬೌಲರುಗಳು ಹೈ ಮಾಸ್ಟರ್, ಹೇಗಿದ್ದೀರಿ ಎಂದು ಗೌರವದಿಂದ ಮಾತನಾಡುತ್ತಿದ್ದರು.

ನಾಲ್ವರು ಶ್ರೇಷ್ಟ ಬೌಲರುಗಳು ಗವಾಸ್ಕರ್‌ಗೆ ಆ ರೀತಿಯಲ್ಲಿ ಗೌರವ ನೀಡುತ್ತಿದ್ದರು. ಅವರೆಲ್ಲಾ ಶ್ರೇಷ್ಟ ಬೌಲರುಗಳಾಗಿದ್ದು, ಹೋಲ್ಡಿಂಗ್, ಗಾರ್ನರ್, ಮಾರ್ಷಲ್ ಮತ್ತು ರಾಬರ್ಟ್ಸ್ ಎಂದು ಅವರು ಹೇಳಿದರು.

Comments are closed.