ಪಾಟ್ನಾ: ಒಂದು ವೇಳೆ, ನೀವು ವಿದ್ಯಾರ್ಥಿಯಾಗಿದ್ದರೆ, ಒಂದು ವೇಳೆ, ಶಾಲಾ ಅಡಳಿತ ಮಂಡಳಿ ಕೆಲ ಕಾರಣಗಳಿಂದ ಪ್ರವಾಸ ರದ್ದುಗೊಳಿಸಿದ್ದರೆ ನೀವು ಏನು ಮಾಡುತ್ತಿದ್ದೀರಿ? ಇಲ್ಲಿನ ವಿದ್ಯಾರ್ಥಿಗಳು ಶಾಲೆಯನ್ನೇ ಧ್ವಂಸಗೊಳಿಸಿದ ಹೇಯ ಘಟನೆ ಬಿಹಾರ್ ರಾಜ್ಯದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.
ಶಾಲಾ ಅಡಳಿತ ಮಂಡಳಿ ಕೆಲ ಕಾರಣಗಳಿಂದ ಪ್ರವಾಸ ರದ್ದುಗೊಳಿಸಿರುವುದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಶಾಲೆಯಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ತಮ್ಮ ಆಕ್ರೋಶವನ್ನು ಮೆರೆದಿದ್ದಾರೆ.
ಪ್ರವಾಸ ರದ್ದುಗೊಳಿಸಿದ್ದರಿಂದ ಅಸಮಾಧಾನಗೊಳ್ಳುವ ಬದಲು ತಾವೇ ಓದುತ್ತಿದ್ದ ಶಾಲೆಯನ್ನೇ ಧ್ವಂಸಗೊಳಿಸಿರುವ ವಿದ್ಯಾರ್ಥಿಗಳ ವರ್ತನೆ ಭಾರಿ ಟೀಕೆಗೆ ಕಾರಣವಾಗಿದೆ.
ವಿದ್ಯಾರ್ಥಿಗಳ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ದೇಶಾದ್ಯಂತ ವಿದ್ಯಾರ್ಥಿಗಳ ಸಮುದಾಯ ಘಟನೆಯನ್ನು ತೀವ್ರವಾಗಿ ಖಂಡಿಸಿದೆ ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
Comments are closed.