ಮುಂಬೈ: ಪ್ರಯಾಣದಲ್ಲಿದ್ದ ಜೆಟ್ ಏರ್ವೇಸ್ನಲ್ಲಿ ಸೆಲ್ಪಿ ಪಡೆದುಕೊಳ್ಳಲಿಕ್ಕಾಗಿ ಗಗನಸಖಿಯನ್ನು ಒತ್ತಾಯಿಸಿ, ಆಕೆ ಜತೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಗುಜರಾತ್ ಮೂಲದ ಮೊಹಮ್ಮದ್ ಅಬೂಬಕರ್ (29) ಬಂಧಿತ ವ್ಯಕ್ತಿ.
ಆರೋಪಿ ಮುಂಬೈಗೆ ಕೇವಲ ಮೋಜಿಗಾಗಿ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ವಿಮಾನದಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲದಿದ್ದರೂ ಶೌಚಾಲಯದಲ್ಲಿ ಈತ ಧೂಮಪಾನ ಮಾಡಿದ್ದಾನೆ. ಗಗನಸಖಿಗೆ ಮೊದಲು ಸೆಲ್ಪಿಗೆ ಪೋಸ್ ನೀಡುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ನಿರಾಕರಿಸಿದ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯ ಕೈಹಿಡಿದು ಎಳೆದಾಡಿದ್ದಾನೆ ಎಂದು ಗಗನಸಖಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ದುಬೈನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವ ಅಬೂಬಕರ್ ದಮ್ಮಂ ಏರ್ಪೋರ್ಟ್ನಿಂದ ಪ್ರಯಾಣ ಆರಂಭಿಸಿ ತನ್ನ ರಾಜ್ಯವಾದ ಗುಜರಾತ್ ಬಿಟ್ಟು ಮುಂಬೈಗೆ ಕೇವಲ ಮೋಜಿಗಾಗಿ ಪ್ರಯಾಣಿಸುತ್ತಿದ್ದ. ವಿಮಾನ ಮುಂಬೈಗೆ ಬರುತ್ತಿದ್ದಂತೆ ನಿಲ್ದಾಣದ ಪೊಲೀಸರು ಈತನನ್ನು ವಶಕ್ಕೆ ಪಡೆದು ಮೊಬೈಲ್ ಫೋನ್ ಜಪ್ತಿ ಮಾಡಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.
Comments are closed.