ಮನೋರಂಜನೆ

ಪ್ರಿಯಾಂಕಾ ಉತ್ತಮ ಕೆಲಸ ಮಾಡಿದ್ದಾಳೆ, ನನ್ನಿಂದ ಸಾಧ್ಯವಿಲ್ಲ : ಕರೀನಾ

Pinterest LinkedIn Tumblr

priಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಸಹ ನಟಿ ಪ್ರಿಯಾಂಕಾ ಛೋಪ್ರಾ ಬಗ್ಗೆ ಹಾಲಿವುಡ್ ಕೆರಿಯರ್ ಬಗ್ಗೆ ಹೊಗಳಿದ್ದಾರೆ. ಪ್ರಿಯಾಂಕಾ ಛೋಪ್ರಾ ಹಾಗೇ ಹಾಲಿವುಡ್‌ನಲ್ಲಿ ನಟಿಸಲು ಸಾಧ್ಯವಿಲ್ಲ.. ನನ್ನ ಲೈಫ್‌ನ ಪ್ರಾಥಮಿಕ ಅಂಶಗಳು ಪ್ರಿಯಾಂಕಾ ಛೋಪ್ರಾ ರಂತೆ ಇಲ್ಲ ಅವು ಬೇರೆಯಾಗಿವೆ ಎಂದು ತಿಳಿಸಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಕರೀನಾ ಕಪೂರ್ ಈ ಮಾತುಗಳನ್ನಾಡಿದ್ದಾರೆ. ವಿಶ್ವದ ಎದುರು ತೀವ್ರ ಜಯಗಳಿಸುವ ಹಂಬಲವಿಲ್ಲ ಎಂದಿದ್ದಾರೆ,

ನನ್ನ ಪ್ರಾಥಮಿಕ ಅಂಶಗಳು ಬೇರೆ ಇವೆ. ಪ್ರಿಯಾಂಕಾ ಛೋಪ್ರಾ ಏನು ಮಾಡಿದ್ದಾಳೆ ಅದು ನನ್ನ ಪ್ರಕಾರ ಅದ್ಫುತವಾದದ್ದು, ನಾನು ಅದನ್ನು ಮಾಡುತ್ತೇನೆ ಎಂದು ನನಗೆ ಅನ್ನಿಸುವುದಿಲ್ಲ. ನಾನು ಪಕ್ಕಾ ಗೃಹಿಣಿಯಾಗಿರಲು ಬಯಸುತ್ತೇನೆ, ನನ್ನ ಜವಾಬ್ದಾರಿಗಳು ಪ್ರಿಯಾಂಕಾಗಿಂತಲೂ ಬೇರೆಯಾಗಿವೆ.

ಆದ್ದರಿಂದ ನಾನು ಎಲ್ಲವನ್ನು ಬಿಟ್ಟು ಲಾಸ್ ಏಂಜಲೀಸ್ ತೆರೆಳಲು ಸಾಧ್ಯವಿಲ್ಲ. ನಾನು ತುಂಬಾ ಸೋಮಾರಿ ಅಂತ ಅನ್ನಿಸುತ್ತೆ. ನನಗೆ ವಿಶ್ವವನ್ನು ಗೆಲ್ಲುವ ಹಂಬಲವಿಲ್ಲ ಎಂದಿದ್ದಾರೆ. ಇನ್ನೂ ಪ್ರಿಯಾಂಕಾ ಜತೆಗೆ ಕರೀನಾ ಕಪೂರ್ 2004ರಲ್ಲಿ ತೆರೆ ಕಂಡ ರೋಮ್ಯಾಂಟಿಕ್ ಥ್ರಿಲ್ಲರ್ ಮೂವೀ ಏತರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Comments are closed.