ಮುಂಬೈ

ಓವೈಸಿ ಕೇಕ್‌ ಪೀಸ್‌ ಪೀಸ್‌ ಮಾಡಿ ರಾಜ್‌ ಠಾಕ್ರೆ ಹುಟ್ಟುಹಬ್ಬ ಆಚರಣೆ!

Pinterest LinkedIn Tumblr

Ovaisi Cake-700ಮುಂಬಯಿ : ವಿವಾದಾತ್ಮಕ ಮುಸ್ಲಿಂ ನಾಯಕ ಹಾಗೂ ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಯ ಚಿತ್ರವಿರುವ ಕೇಕ್‌ ಅನ್ನು ಪೀಸ್‌ ಪೀಸ್‌ ಮಾಡಿ ಹಂಚಿ ತಿನ್ನುವ ಮೂಲಕ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಮುಖ್ಯಸ್ಥ ರಾಜ್‌ ಠಾಕ್ರೆ ಅವರಿಂದು ತಮ್ಮ 48ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು.

ಮಹಾರಾಷ್ಟ್ರದ ವಿರುದ್ಧ ಮಾತನಾಡುವ ಯಾರನ್ನೇ ಆದರೂ ಇದೇ ರೀತಿ ಪೀಸ್‌ ಪೀಸ್‌ ಮಾಡಲಾಗುವುದು ಎಂದು ರಾಜ್‌ ಠಾಕ್ರೆ ಈ ಸಂದರ್ಭದಲ್ಲಿ ಹೇಳಿದರು !

ರಾಜ್‌ ಠಾಕ್ರೆ ಅವರ 48ನೇ ಹುಟ್ಟು ಹಬ್ಬದ ದಿನವಾದ ಇಂದು ಅವರ ಬೆಂಬಲಿಗರು ಮಧ್ಯ ಮುಂಬಯಿಯ ದಾದರ್‌ನಲ್ಲಿರುವ ರಾಜ್‌ ಠಾಕ್ರೆ ಅವರ “ಕೃಷ್ಣ ಕುಂಜ್‌’ ನಿವಾಸಕ್ಕೆ ಆಗಮಿಸಿ, ಹುಟ್ಟುಹಬ್ಬದ ಶುಭಾಶಯ ಹೇಳಿದ್ದರು. ಬೆಂಬಲಿಗರು ತಮ್ಮೊಂದಿಗೆ ಓವೈಸಿ ಚಿತ್ರವಿರುವ ಕೇಕ್‌ ಅನ್ನು ತಂದ್ದಿರು. ಅವರ ಆಶಯದಂತೆ ರಾಜ್‌ ಠಾಕ್ರೆ, ಓವೈಸಿ ಕೇಕ್‌ ಕಟ್‌ ಮಾಡಿ ಎಲ್ಲರಿಗೂ ತಿನ್ನಿಸಿದರು.

ರಾಜ್‌ ಠಾಕ್ರೆ ಅವರು ಓವೈಸಿ ಕೇಕ್‌ ಕಟ್‌ ಮಾಡಿ ಹೇಳಿದರೆಂಬ ಪ್ರಚೋದನಕಾರಿ ಮಾತುಗಳನ್ನು ಎಐಎಂಐಎಂ ಖಂಡಿಸಿದ್ದು ಪಕ್ಷದ ಶಾಸಕ ವಾರಿಸ್‌ ಪಠಾಣ್‌ ಅವರು ಓವೈಸಿ ಕೇಕ್‌ ಕಟ್‌ ಮಾಡಿರುವವರ ವಿರುದ್ಧ ಕಾನೂನು ಕ್ರಮವನ್ನು ಆಗ್ರಹಿಸಿದ್ದಾರೆ.

ಈ ವರ್ಷಾರಂಭದಲ್ಲಿ ಭಾರತ್‌ ಮಾತಾ ಕೀ ಜೈ ಘೋಷಣೆ ವಿವಾದದ ಸ್ವರೂಪವನ್ನು ಪಡೆದಿದ್ದಾಗ ಓವೈಸಿ ಅವರು “ನನ್ನ ಕೊರಳಿಗೆ ಚೂರಿಯಿಂದ ಇರಿದರೂ ನಾನು ಭಾರತ್‌ ಮಾತಾ ಕೀ ಜೈ ಘೋಷಣೆ ಕೂಗುವುದಿಲ್ಲ’ ಎಂದು ಹೇಳಿದ್ದರು. ರಾಜ್‌ ಠಾಕ್ರೆ ಅವರು ಓವೈಸಿಯನ್ನು ಈ ಹೇಳಿಕೆಗಾಗಿ ಉಗ್ರವಾಗಿ ಖಂಡಿಸಿದ್ದರು.
-ಉದಯವಾಣಿ

Comments are closed.