ಕರ್ನಾಟಕ

ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ!

Pinterest LinkedIn Tumblr

14-BANA-5ಬೆಂಗಳೂರು: ಬೇರೆಯವರಿಂದ ಕೊಡಿಸಿದ್ದ ಸಾಲ ಮರಳಿಸದೆ ಸತಾಯಿಸುತ್ತಿದ್ದರಿಂದ ನೊಂದ ವ್ಯಕ್ತಿಯೊಬ್ಬರು ತನ್ನ ಸಾವಿಗೆ ಯಿಯ ಸಹೋದರನೇ ಕಾರಣ ಎಂದು ಸೆಲ್ಫಿ ವಿಡಿಯೋ ಚಿತ್ರೀಕರಿಸಿಟ್ಟು ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಆಟೋ ಚಾಲಕ, ಇಂದಿರಾನಗರದ ನಿವಾಸಿ ನಜೀಂ ಪಾಷಾ (32) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಈ ಸಂಬಂಧ
ಮೃತ ವ್ಯಕ್ತಿಯ ಮಾವ ಆದಿಲ್‌ ಅಹ್ಮದ್‌ (40) ಎಂಬುವನನನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ. ನಜೀಂ ಪಾಷಾ ಆತ್ಮಹತ್ಯೆಗೂ ತನ್ನ ಹೇಳಿಕೆಯನ್ನು ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿ ವಕೀಲರೊಬ್ಬರಿಗೆ ಕಳುಹಿಸಿಕೊಟ್ಟಿದ್ದ
ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?: ಆಟೋ ಚಾಲಕ ನಜೀಂ ಪಾಷಾ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಇಂದಿರಾನಗರದಲ್ಲಿ ನೆಲೆಸಿದ್ದ. ಆತನ ತಾಯಿಯ
ಸಹೋದರ, ಗೋಪಾಲಪುರ ನಿವಾಸಿ ಆದಿಲ್‌ ಅಹ್ಮದ್‌ಗೆ ಸಂಕಷ್ಟದ ಸಮಯದಲ್ಲಿ ನಜೀಂ ಪಾಷಾ ಬೇರೆಯವರಿಂದ ಒಂದೂವರೆ ಲಕ್ಷ
ರೂ. ಸಾಲ ಕೊಡಿಸಿದ್ದ. ಆದಿಲ್‌ ಅಹ್ಮದ್‌ ಸರ್ಕಾರಿ ಇಲಾಖೆಯೊಂದರಲ್ಲಿ ಡಿ ಗ್ರೂಪ್‌ ನೌಕರನಾಗಿದ್ದರೂ ಹಣ ವಾಪಸ್‌ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಲ ಕೊಟ್ಟವರು ನಜೀಂ ಪಾಷಾ ಬೆನ್ನುಬಿದ್ದಿದ್ದರು. ಹೀಗಾಗಿ ನಜೀಂ ಪಾಷಾ ಹಣ ವಾಪಸ್‌ ಮಾಡುವಂತೆ ಆದಿಲ್‌ ಅಹ್ಮದ್‌ಗೆ ಒತ್ತಾಯಿಸಿದ್ದನಾದರೂ ನಾಳೆ ಕೊಡುತ್ತೇನೆ ಎಂದು ಹೇಳಿ ಸತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ನಜೀಂ ಪಾಷಾ ಭಾನುವಾರ ಆದಿಲ್‌ ಅಹ್ಮದ್‌ ಮನೆಗೆ ಹೋಗಿ
ಹಣ ನೀಡುವಂತೆ ಗಲಾಟೆ ಮಾಡಿದ್ದ. ಆದರೆ, ಆತ ಹಣ ನೀಡಲು ಸಾಧ್ಯವಿಲ್ಲ. ಮತ್ತೆ ಕೇಳಲು ಬರಬೇಡ ಎಂದು ಜೋರು ಮಾಡಿ ವಾಪಸ್‌
ಕಳುಹಿಸಿದ್ದ.

ಇದರಿಂದ ಬೇಸರಗೊಂಡ ನಜೀಂ ಪಾಷಾ ಅಲ್ಲಿಂದ ನೇರವಾಗಿ ಶ್ರೀರಾಂಪುರದಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದಾನೆ. ಬಳಿಕ ತನ್ನ ಮೊಬೈಲ್‌ನಲ್ಲಿ, “ನನ್ನ ಸಾವಿಗೆ ತಾಯಿಯ ಸಹೋದರ ಕಾರಣ. ಅವನನ್ನು ಸುಮ್ಮನೆ ಬಿಡಬೇಡಿ, ಆತನಿಗೆ ಶಿಕ್ಷೆಯಾಗಬೇಕು’ ಎಂದು ಸೆಲ್ಫಿ ವಿಡಿಯೋ ಚಿತ್ರೀಕರಿಸಿ ಅದನ್ನು ವಕೀಲ ಬಸವರಾಜ್‌ ಎಂಬುವರಿಗೆ ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಪೊಲೀಸರಿಗೆ ತಿಳಿಸಿದರು. ಈ ಸಂಬಂಧ ಶ್ರೀರಾಂಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
-ಉದಯವಾಣಿ

Comments are closed.