ಮನೋರಂಜನೆ

ಪುಷ್ಪಕ ವಿಮಾನ ಸಿನಿಮಾದಲ್ಲಿ ಅಭಿನಯಿಸಿದ್ದರ ಬಗ್ಗೆ ಜೂಹಿ ಹೇಳಿದ್ದೇನು?

Pinterest LinkedIn Tumblr

juಮುಂಬೈ: ಪ್ರೇಮಲೋಕ ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ ನಿಂಬೆ ಹಣ್ಣಿನ ಅಂತಾ ಹಾಡಿಗೆ ಸೊಂಟ ಬಳುಕಿಸಿದ್ದ ನಟಿ ಜೂಹಿ ಚಾವ್ಲಾ ಅವರು ಇದೀಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.ಅದು ರಮೇಶ್ ಅರವಿಂದ್ ಅವರು ಅಭಿನಯಿಸುತ್ತಿರುವ ಪುಷ್ಪಕ ವಿಮಾನ ಸಿನಿಮಾದಲ್ಲಿ.

ಆದ್ರೆ ಈ ಸಿನಿಮಾದಲ್ಲಿ ಜೂಹಿ ಐಟಂ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಿದ್ದಾರೆ.ಆದ್ರೆ ಐಟಂ ಸಾಂಗ್ ನ್ಲಲಿ ಅಭಿನಯಿಸಲು ಒಪ್ಪಿಕೊಳ್ಳೋದಕ್ಕೆ ಕಾರಣ ಏನು ಅನ್ನೋದನ್ನು ಅವರು ಹೇಳಿದ್ದಾರೆ.

ಅಂದ್ಹಾಗೆ ಜೂಹಿ ಅವರು ಐಟಂ ಸಾಂಗ್ ನಲ್ಲಿ ಅಭಿನಯಿಸೋದಕ್ಕೆ ಆಸಕ್ತಿ ಇರಲಿಲ್ಲವಂತೆ.ಆದ್ರೆ ನಿರ್ದೇಶಕರು ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಹೇಳಿದಾಗ ನಾನು ಒಪ್ಪಿಕೊಂಡೆ.

ಅದಕ್ಕೆ ಕಾರಣ ಇದೆ. ಯಾಕಂದೆರೆ ಈ ಸಿನಿಮಾದಲ್ಲಿ 1980-90 ರ ದಶಕದ ಕಥೆ ಇದೆ. ಜೈಲಿನ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್‌ ಸ್ಟಾರ್‌‌‌‌‌ ಭಾಗವಹಿಸುವ ಸನ್ನಿವೇಶವಿದೆ. ಆ ಪಾತ್ರಕ್ಕೆ ನನ್ನನ್ನು ಬಿಟ್ಟು ಬೇರೆ ನಟಿಯರು ಹೊಂದದ ಕಾರಣ ನಾನು ಐಟಂ ಸಾಂಗ್‌ನಲ್ಲಿ ನಟಿಸಲು ಒಪ್ಪಬೇಕಾಯಿತು ಎಂದು ಜೂಹಿ ಹೇಳಿದ್ದಾರೆ. 25 ವರ್ಷಗಳ ನಂತರ ಜೂಹಿ ಕನ್ನಡದಲ್ಲಿ ನಟಿಸಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ರಚಿತಾ ರಾಮ್ ಅವರು ರಮೇಶ್ ಅರವಿಂದ್ ಅವರ ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನಾನು ಕಾರಣಗಳಿಗೆ ಸುದ್ದಿಯಾಗಿರುವ ಈ ಸಿನಿಮಾವನ್ನು ನೋಡೋದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದಲ್ಲಿ ಇದೊಂದು ವಿಭಿನ್ನ ಪ್ರಯತ್ನವಾಗಿದೆ.

Comments are closed.