ಮನೋರಂಜನೆ

ಹೃತಿಕ್ ಹಾಗೂ ತಾನು ದೂರವಾಗಿದ್ದು ಏಕೆ ಅಂದ್ರು ಸುಸೈನ್

Pinterest LinkedIn Tumblr

hriಮುಂಬೈ: ಎರಡು ವರ್ಷಗಳ ಹಿಂದೆ ಹೃತಿಕ್ ಹಾಗೂ ಸುಸೈನ್ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಘೋಷಿಸಿದಾಗ ಹೃತಿಕ್ ಅಭಿಮಾನಿಗಳಿಗೆ ಆಪ್ತರಿಗೆ ಇದನ್ನು ನಂಬೋದಕ್ಕೆ ತುಂಬಾನೇ ಕಷ್ಟವಾಗಿತ್ತು. ಇವರಿಬ್ಬರು ನಿಜವಾಗಿಯೂ ದೂರವಾಗುತ್ತಾರಾ. ದೂರವಾಗುವಂತಹದ್ದು ಇವರಿಗೇನಾಗಿದೆ ಅಂತಾ ಜನ ಲೆಕ್ಕಾಚಾರ ಹಾಕುತ್ತಿದ್ದರು.

ಆದ್ರೆ ಹೃತಿಕ್ ಆಗಲಿ ಇಲ್ಲಾ ಸುಸೈನ್ ಆಗಲಿ ಈ ಬಗ್ಗೆ ಹೆಚ್ಚೇನು ಹೇಳಿರಲಿಲ್ಲ.ಆದ್ರೀಗ ಸುಸೈನ್ ಬಾಯ್ಬಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸುಸೈನ್, ನಾನು ಹಾಗೂ ಹೃತಿಕ್ ಬಾಲ್ಯದ ಗೆಳೆಯರು. ಗಂಡ ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಸ್ನೇಹಿತರು.

ಆದ್ರೆ ಅದ್ಯಾಕೋ ನಮಗೆ ಸಂಸಾರದಲ್ಲಿ ಸಮರಸ ಸಾಧಿಸೋದಕ್ಕೆ ಸಾಧ್ಯವಾಗಲಿಲ್ಲ. ಒಂದು ಸಂಬಂಧ ಸರಿ ಬರೋದಿಲ್ಲ ಅಂದಮೇಲೆ ಅದನ್ನು ಮುಂದುವರೆಸಿಕೊಂಡು ಹೋಗೋದು ಸರಿ ಕಾಣಲಿಲ್ಲ. ಹಾಗಾಗಿ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದಲೇ ದೂರವಾದೆವು. ಆದ್ರೆ ಇಂದಿಗೂ ನಾವು ಮಕ್ಕಳಿಗೆ ಮಾತ್ರ ನಾವಿಬ್ಬರು ದೂರವಾಗಿ ಅವರಿಗೆ ಕಷ್ಟವಾಗುತ್ತಿದೆ ಅನ್ನೋ ರೀತಿ ನಡೆದುಕೊಳ್ಳುತ್ತಿಲ್ಲ ಅಂತಾ ಸುಸೈನ್ ಹೇಳಿದ್ದಾರೆ.

ಇನ್ನು ನಾವು ಇವತ್ತಿಗೂ ಉತ್ತಮ ಗೆಳೆಯರು. ಆಗಾಗ್ಗೆ ಭೇಟಿಯಾಗುತ್ತೇವೆ. ಪರಸ್ಪರ ಚಾಟ್ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಅದಕ್ಕಿಂತೂ ಹೆಚ್ಚಾಗಿ ಇಂದಿಗೂ ಹೃತಿಕ್ ರೋಷನ್ ಹಾಗೂ ಸುಸೈನ್ ಇಬ್ಬರೂ ಕೂಡ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಕಂಗನಾ ವಿಚಾರದಲ್ಲೂ ಸುಸೈನ್ ಅವರು ಹೃತಿಕ್ ರೋಷನ್ ಅವರಿಗೆ ಸಾಕಷ್ಟು ಬೆಂಬಲ ನೀಡಿದ್ದರು.

Comments are closed.