ಮುಂಬೈ

ಮುಂಗಾರು ಮಳೆಯಲ್ಲಿ ಸೆಲ್ಫಿ ತೆಗೆದುಕೊಂಡ ನಟಿ ಸೋಹಾ ಅಲಿ ಖಾನ್

Pinterest LinkedIn Tumblr

rainಮುಂಬೈ: ಎಲ್ಲಾ ಕಡೆಗಳಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದೆ ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಮಳೆಯ ಜತೆಗೆ ಸೆಲ್ಫಿ ತೆಗೆದುಕೊಂಡು ಶೇರ್ ಮಾಡಿದ್ದಾರೆ.

ಮುಂಬೈಯಲ್ಲಿ ಮುಂಗಾರು ಮಳೆ ಪ್ರವೇಶಿಸಿದ ಹಿನ್ನೆಲೆ ಸೋಹಾ ಅಲಿ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಮುಂಗಾರು ಮಳೆಯನ್ನು ಸ್ವಾಗತಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಾಲಿವುಡ್ ದಿಗ್ಗಜರು ಮುಂಗಾರು ಮಳೆಯನ್ನು ಸ್ವಾಗತಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಆದ್ರೆ ನಟಿ ಸೋಹಾ ಅಲಿ ಖಾನ್ ಕೂಡ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಫೊಟೋಗೆ ಪೋಸ್ ನೀಡಿದ್ದಾರೆ.

ಇನ್ನೂ ಬಾಲಿವುಡ್ ನಟ ಅರ್ಬಾಜ್ ಖಾನ್ ಕೂಡ ಮುಂಗಾರು ಮಳೆಯಲ್ಲಿ ತನ್ನ ಅಮ್ಮನ ಜತೆಗೆ ಕಳೆಯುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ‌ನಲ್ಲಿ ಫೊಟೋ ಶೇರ್ ಮಾಡಿರುವ ಅರ್ಬಾಜ್ ಖಾನ್ ಮಾನಸೂನ್ ವಿಕೆಂಡ್‌ನಲ್ಲಿ ತನ್ನ ತಾಯಿಯ ಜತೆ ಎಂಜಾಯ್ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Comments are closed.