ಮುಂಬೈ

ವಿಚಿತ್ರ ಮಗು ಜನನ: ಆಸ್ಪತ್ರೆಯತ್ತ ದೌಡಾಯಿಸಿದ ಜನಸ್ತೋಮ…!

Pinterest LinkedIn Tumblr

childಬಿಹಾರ, ಮೇ 31- ಸೃಷ್ಟಿಯಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಸ್ಮ, ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆ ಉದಾಹರಣೆಯಾಗಿ ತಾಯಿಯೊಬ್ಬಳಿಗೆ ವಿಚಿತ್ರ ಮಗು ಜನನವಾಗಿದೆ. ಇಲ್ಲಿನ ಪೂರ್ಣಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ವಿಚಿತ್ರ ಮಗು ಜನನವಾಗಿದೆ. ಮಗು ಹುಟ್ಟಿದೊಡನೆ ವೈದ್ಯರು ಹಾಗೂ ಆಸ್ಪತ್ರೆಯಲ್ಲಿದ್ದ ಜನರು ದಿಗ್ಬ್ರಾಂತಗೊಂಡಿದ್ದು, ಈ ಸುದ್ದಿ ಕೇಳಿ ಆಸ್ಪತ್ರೆಯತ್ತ ಮಗು ವೀಕ್ಷಣೆಗಾಗಿ ಜನ ಮುಗಿ ಬೀಳುತ್ತಿದ್ದಾರೆ.

ಪೂರ್ಣಿಯ ಚಹ್ಬಜ್ಜಾಗ್ರಾಮದ ಋಷಿಕುಮಾರ್ ಎಂಬವರ ಪತ್ನಿ ಶಾಂತಿದೇವಿ ಈ ಮಗುವಿಗೆ ಜನ್ಮನೀಡಿದ್ದಾರೆ. ಮಗು ಹುಟ್ಟಿದೊಡನೆ ವೈದ್ಯರು ಹಾಗೂ ದಾದಿಯರು ಬೆಚ್ಚಿಬಿದ್ದರು ಎನ್ನಲಾಗಿದೆ. ಕೂಡಲೇ ಅವರು ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ತಲೆಯಲ್ಲಿ ಮಾಂಸದ ಮುದ್ದೆಯಂತೆ ಇದ್ದು ಇಡೀ ಮುಖ ಕುಂಕುಮ ಬಣ್ಣದಲ್ಲಿದೆ. ಆದರೆ, ಶಾಂತಿ ದೇವಿ ಮಗುವನ್ನು ತೋರಿಸಲು ನಿರಾಕರಿಸಿದ್ದಾರೆ.

Comments are closed.