ಕರ್ನಾಟಕ

ಸೋಲು ಗೆಲುವಿಗೆ ಚೌಕಾಸಿ

Pinterest LinkedIn Tumblr

congress

ಬೆಂಗಳೂರು, ಮೇ ೩೧- ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಯನ್ನು ಕುತೂಹಲ ಘಟ್ಟಕ್ಕೆ ಕೊಂಡೊಯ್ದಿರುವಾಗಲೇ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಾಜ್ಯಸಭಾ ಹಾಗೂ ವಿಧಾನ ಪರಿಷತ್ತಿನ ಚುನಾವಣೆ ಗೆಲುವು ಕುತೂಹಲಕ್ಕೆ ಕಾರಣವಾಗಿದೆ.
ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಎರಡನೇ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಪರಸ್ಪರ ಚೌಕಾಶಿಗೆ ಇಳಿದಿದ್ದು, ಯಾವ ಪಕ್ಷದ ಅಭ್ಯರ್ಥಿ ಅಂತಿಮವಾಗಿ ಕಣದಲ್ಲಿ ಉಳಿಯುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ವಿಧಾನ ಪರಿಷತ್‌ಗೆ 2ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಪರಸ್ಪರ ಕೊಡು-ಕೊಳ್ಳುವ ಚರ್ಚೆಗೆ ಮುಂದಾಗಿದ್ದು, ಎರಡೂ ಪಕ್ಷಗಳ ನಾಯಕರುಗಳು ಪರಸ್ಪರ ಚರ್ಚೆ ನಡೆಸಿದ್ದಾರೆ.
ಜೆಡಿಎಸ್‌ನ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 2ನೇ ಅಭ್ಯರ್ಥಿಯಾಗಿರುವ ವೆಂಕಟಾಚಲಪತಿಯವರಿಗೆ ಬೆಂಬಲ ನೀಡುವಂತೆ ಬಿಜೆಪಿ ನಾಯಕರಲ್ಲಿ ಮನವಿ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜೆಡಿಎಸ್ ನಾಯಕರ ಮನವೊಲಿಸಿ ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಲೆಯರ್‌ಸಿಂಗ್‌ರವರನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.
ಜೆಡಿಎಸ್ ಜತೆ ಚರ್ಚೆ ನಡೆಸಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಯೇ ವಿಧಾನ ಪರಿಷತ್ತಿನಲ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿ, ಮಾತುಕತೆ, ವಿವರಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.
ರಾಜ್ಯಸಭೆಯ 4 ಸ್ಥಾನಗಳಿಗೆ 5 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಮೂರನೇ ಅಭ್ಯರ್ಥಿಯ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಹಣಾಹಣಿಯೇ ನಡೆದಿದೆ. ಈಗ ವಿಧಾನ ಪರಿಷತ್‌ನ 7ನೇ ಸ್ಥಾನಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಕಾಂಗ್ರೆಸ್ ಮಾತ್ರ ವಿಧಾನ ಪರಿಷತ್ ಚುನಾವಣೆಗೆ ತನ್ನ ಪಾಲಿನ 4 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿ ಯಾವುದೇ ಸಾಹಸಕ್ಕೆ ಮುಂದಾಗಿಲ್ಲ.
@12bc = ನಾಮಪತ್ರ ಸಲ್ಲಿಕೆ
ಇಂದು ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಆರ್.ಬಿ. ತಿಮ್ಮಾಪುರ ಇವರುಗಳು ವಿಧಾನ ಪರಿಷತ್ ಚುನಾವಣೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಜತೆಗೆ ರಾಜ್ಯಸಭಾ ಅಭ್ಯರ್ಥಿಗಳಾಗಿರುವ ಕೇಂದ್ರದ ಮಾಜಿ ಸಚಿವರುಗಳಾದ ಆಸ್ಕರ್‌ಫರ್ನಾಂಡೀಸ್, ಜೈರಾಮ್ ರಮೇಶ್ ಇವರುಗಳು ಸಹ ಇಂದು ಮೂರನೇ ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಉಪಸ್ಥಿತರಿದ್ದರು.

ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ವಿವರ
ರಾಜ್ಯಸಭೆ (4 ಸ್ಥಾನ)
1. ಆಸ್ಕರ್ ಫರ್ನಾಂಡೀಸ್ (ಕಾಂಗ್ರೆಸ್)
2. ಜೈರಾಮ್ ರಮೇಶ್ (ಕಾಂಗ್ರೆಸ್
3. ಕೆ.ಸಿ. ರಾಮಮೂರ್ತಿ (ಕಾಂಗ್ರೆಸ್)
4. ನಿರ್ಮಲಾಸೀತರಾಮನ್ (ಬಿಜೆಪಿ)
5. ಎಂ. ಫಾರೂಕ್ (ಜೆಡಿಎಸ್)

ವಿಧಾನ ಪರಿಷತ್ (7 ಸ್ಥಾನ)
1. ಅಲ್ಲಂ ವೀರಭದ್ರಪ್ಪ (ಕಾಂಗ್ರೆಸ್)
2. ಆರ್.ಬಿ. ತಿಮ್ಮಾಪುರ (ಕಾಂಗ್ರೆಸ್)
3. ರಿಜ್ವಾನ್ ಹರ್ಷದ್ (ಕಾಂಗ್ರೆಸ್)
4. ವೀಣಾ ಅಚ್ಚಯ್ಯ (ಕಾಂಗ್ರೆಸ್)
5. ವಿ. ಸೋಮಣ್ಣ (ಬಿಜೆಪಿ)
6. ಲೆಯರ್ ಸಿಂಗ್ (ಬಿಜೆಪಿ)
7. ವಿ. ನಾರಾಯಣಸ್ವಾಮಿ (ಜೆಡಿಎಸ್)
8. ಎಂ. ವೆಂಕಟಾಚಲಪತಿ (ಜೆಡಿಎಸ್)
9. ಅನಿಲ್‌ಕುಮಾರ್ (ಪಕ್ಷೇತರ)

Comments are closed.