ರಾಷ್ಟ್ರೀಯ

ವಿಶ್ವದ 10 ಶ್ರೀಮಂತ ರಾಷ್ಟ್ರಗಳಲ್ಲಿ ಭಾರತಕ್ಕೆ ಏಳನೇ ಸ್ಥಾನ

Pinterest LinkedIn Tumblr

indian-wealthನವದೆಹಲಿ: ವಿಶ್ವದಲ್ಲಿ 10 ಶ್ರೀಮಂತ ದೇಶಗಳಲ್ಲಿ ಭಾರತ 7ನೇ ಸ್ಥಾನದಲ್ಲಿದ್ದು, ಇಲ್ಲಿನ ನಾಗರಿಕರ ಒಟ್ಟು ಸಂಪತ್ತು 5 ಸಾವಿರದ 200 ಶತಕೋಟಿ ಡಾಲರ್ ಆಗಿದೆ. ಆದರೆ ಭಾರತದ ಜನಸಂಖ್ಯೆ ಅಧಿಕವಾಗಿದ್ದು, ಪ್ರತಿ ವ್ಯಕ್ತಿಯ ಸರಾಸರಿ ಆದಾಯ ನೋಡಿದರೆ ಭಾರತೀಯರ ಸ್ಥಿತಿ ಬಡತನದಲ್ಲಿದೆ ಎಂದು ನ್ಯೂ ವಲ್ಡ್ರ್ ವೆಲ್ತ್ ನೀಡಿದ ವರದಿಯಿಂದ ತಿಳಿದುಬಂದಿದೆ.
ವರದಿಯ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ದೇಶ ಅಮೆರಿಕ ಆಗಿದ್ದು ಇಲ್ಲಿನ ಒಟ್ಟು ಸಂಪತ್ತು 48 ಸಾವಿರದ 700 ಶತಕೋಟಿ ಡಾಲರ್ ಆಗಿದೆ.
ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿರುವುದರಿಂದ ವ್ಯಕ್ತಿಯ ಸರಾಸರಿ ಆದಾಯದಲ್ಲಿ ದೇಶ ಬಡರಾಷ್ಟ್ರವಾಗಿದೆ. ಕಳೆದ 15 ವರ್ಷಗಳಲ್ಲಿ ಭಾರತ ಅಭಿವೃದ್ಧಿಹೊಂದಿದೆ ಎಂದು ವರದಿ ಹೇಳಿದೆ.
ಚೀನಾ ಅತ್ಯಂತ ವೇಗವಾಗಿ ಕಳೆದ 15 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದೆ. ಆಸ್ಟ್ರೇಲಿಯಾ ಮತ್ತು ಭಾರತ ದೇಶಗಳೂ ಕೂಡ ಶಕ್ತಿಯುತವಾಗಿ ಬೆಳೆಯುತ್ತಿವೆ. ಅಷ್ಟೇ ಅಲ್ಲದೆ ಭಾರತ ಆರ್ಥಿಕ ಬೆಳವಣಿಗೆಯಲ್ಲಿ ಇಟೆಲಿಯನ್ನು ಹಿಂದಿಕ್ಕಿದೆ. ಆಸ್ಟ್ರೇಲಿಯಾ ಮತ್ತು ಕೆನಡಾಗಳು ಇಟೆಲಿಯನ್ನು ಮುಂದಿನ ಕೆಲ ವರ್ಷಗಳಲ್ಲಿ ಹಿಂದಿಕ್ಕಲಿವೆ.
ಟಾಪ್ 5 ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕಾ, ನಂತರದ ಸ್ಥಾನಗಳಲ್ಲಿ ಚೀನಾ, (ಒಟ್ಟು ಸಂಪತ್ತು 17 ಸಾವಿರದ 300 ಶತಕೋಟಿ ಡಾಲರ್, ಜಪಾನ್(15 ಸಾವಿರದ 200 ಶತಕೋಟಿ ಡಾಲರ್, ) ಜರ್ಮನಿ(9 ಸಾವಿರದ 400 ಶತಕೋಟಿ ಡಾಲರ್) ಮತ್ತು ಇಂಗ್ಲೆಂಡ್ (9 ಸಾವಿರದ 200 ಶತಕೋಟಿ ಡಾಲರ್) ಇವೆ.
ನಂತರದ 5 ರಾಷ್ಟ್ರಗಳ ಪಟ್ಟಿಯಲ್ಲಿ ಫ್ರಾನ್ಸ್, ಇಟೆಲಿಗೆ 8ನೇ ಸ್ಥಾನ, ಕೆನಡಾ ಮತ್ತು ಆಸ್ಟ್ರೇಲಿಯಾ 9 ಮತ್ತು 10ನೇ ಸ್ಥಾನದಲ್ಲಿವೆ. ಆಸ್ಟ್ರೇಲಿಯಾದ ಜನಸಂಖ್ಯೆ ಕೇವಲ 22 ದಶಲಕ್ಷವಿರುವುದರಿಂದ ದೇಶ ಸಂಪದ್ಭರಿತವಾಗಿದೆ.
ಒಟ್ಟು ವೈಯಕ್ತಿಕ ಸಂಪತ್ತು ಎಂದರೆ ಪ್ರತಿ ದೇಶದಲ್ಲಿ ಜನರು ಹೊಂದಿರುವ ಖಾಸಗಿ ಸಂಪತ್ತು. ಸಂಪತ್ತು ಎಂದರೆ ವ್ಯಕ್ತಿಯ ನಿವ್ವಳ ಆಸ್ತಿ. ಅದು ವ್ಯಕ್ತಿಯ ಎಲ್ಲಾ ರೀತಿಯ ಸಂಪತ್ತು ಒಳಗೊಂಡಿರುತ್ತದೆ, ಕೇವಲ ಹಣವಲ್ಲ. ವರದಿಯಲ್ಲಿ ಸರ್ಕಾರದ ಹಣವನ್ನು ಸೇರಿಸಿಕೊಂಡಿಲ್ಲ.

Comments are closed.