ಕರ್ನಾಟಕ

ಜೂ.2ರಂದು ಸರ್ಕಾರಿ ನೌಕರರ ಮುಷ್ಕರ : ಆಡಳಿತ ಯಂತ್ರ ಸ್ಥಗಿತ ಸಂಭವ

Pinterest LinkedIn Tumblr

saraಬೆಂಗಳೂರು, ಮೇ 31-ಕೇಂದ್ರ ಸರ್ಕಾರಿ ನೌಕರಂತೆ ತಮಗೂ ಸರಿಸಮಾನವಾದ ವೇತನ ಮತ್ತು ಭತ್ಯೆಗಳನ್ನು ನೀಡುವಂತೆ ಒತ್ತಾಯಿಸಿ ಜೂ.2ರಂದು ರಾಜ್ಯಾದ್ಯಂತ ಸರ್ಕಾರಿ ನೌಕರರು ಮುಷ್ಕರ ನಡೆಸಲಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾದ್ಯಂತ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದ್ದು, ಜೂ.2ರಂದು ಎಲ್ಲಾ ಸರ್ಕಾರಿ ನೌಕರರು ರಜೆ ಹಾಕದೆ ಗೈರು ಹಾಜರಾಗಬೇಕೆಂದು ಮನವಿ ಮಾಡಿದೆ. ಸರ್ಕಾರಿ ನೌಕರರ ಸಂಘದ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಜೂ.2ರಂದು ಇಡೀ ಸರ್ಕಾರಿ ಯಂತ್ರವೇ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮುಷ್ಕರ ನಡೆಸುವ ಸಂಬಂಧ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರಿಗೆ ಕಳೆದ ಏ.18ರಂದೇ ಮನವಿ ಪತ್ರ ಸಲ್ಲಿಸಲಾಗಿತ್ತು. ಪದೇ ಪದೇ ರಾಜ್ಯಸರ್ಕಾರಕ್ಕೆ ಸಂಘ ಮನವಿ ಮಾಡಿದರೂ ಕೂಡ ಸರ್ಕಾರಿ ನೌಕರರ ಬೇಡಿಕೆಗಳನ್ನು ರಾಜ್ಯಸರ್ಕಾರ ಈಡೇರಿಸುತ್ತಿಲ್ಲ ಎಂಬುದು ಸಂಘದ ವಾದ. ಆಸ್ಪತ್ರೆಗಳ ಔಷಧಿ ವಿತರಕರು, ತುರ್ತು ಚಿಕಿತ್ಸಾ ಸೇವಾ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಸೇರಿದಂತೆ ಅತ್ಯಾವಶ್ಯಕ ಸೇವೆಗಳ ಸರ್ಕಾರಿ ನೌಕರರು ಮುಷ್ಕರವಿದ್ದರೂ ಕೂಡ ಸೇವೆ ಸಲ್ಲಿಸಲಿದ್ದಾರೆ.

ಸಾರ್ವಜನಿಕರಿಗೆ ಮತ್ತು ರೋಗಿಗಳಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಸರ್ಕಾರಿ ನೌಕರರು ಮುಷ್ಕರದಲ್ಲೂ ಸೇವೆ ಸಲ್ಲಿಸಲಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಈ ಸಂಜೆಗೆ ತಿಳಿಸಿದರು. ಜೂ.2ರಂದು ಒಂದು ದಿನ ಸಾಂಕೇತಿಕ ಮುಷ್ಕರ ಕೈಗೊಂಡು ಸರ್ಕಾರದ ಗಮನ ಸೆಳೆಯುವುದು ನಮ್ಮ ಉದ್ದೇಶ. ಅಂದು ಎಲ್ಲಾ ಸರ್ಕಾರಿ ನೌಕರರು ಗೈರು ಹಾಜರಾಗುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದಲ್ಲಿ ಸುಮಾರು ಐದೂ ಕಾಲು ಲಕ್ಷ ನೌಕರರಿದ್ದು, ತುರ್ತು ಸೇವೆ ಸಲ್ಲಿಸುವವರು ಸುಮಾರು ಒಂದು ಲಕ್ಷದಷ್ಟಿದ್ದಾರೆ. ಸರ್ಕಾರದ ವಿವಿಧ ನಿಗಮ, ಮಂಡಳಿ ಹಾಗೂ ವಿಶ್ವವಿದ್ಯಾನಿಲಯಗಳ ನೌಕರರು ಸಂಘದ ಸದಸ್ಯರಾಗಿಲ್ಲ

Comments are closed.