ಮನೋರಂಜನೆ

ಮುಂದಿನ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜತೆ ಅನುಷ್ಕಾ ಶೆಟ್ಟಿ

Pinterest LinkedIn Tumblr

anuಮುಂಬೈ: ಮುಂಬರುವ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮೆಗಾಸ್ಟಾರ್ ಚಿರಂಜೀವಿ ಜತೆ ನಟಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಚಿತ್ರ ಚಿರಂಜೀವಿಯವರ 150ನೇ ಚಿತ್ರ. ಈ ಹಿನ್ನೆಲೆಯಲ್ಲಿ ಈ ಚಿತ್ರದಲ್ಲಿ ಚಿರಂಜೀವಿ ಜತೆ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಿರುವುದು ಮಾಡುತ್ತಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕೂತುಹಲ ಮೂಡಿಸಿದೆ.

ಇನ್ನೂ ಈ ಚಿತ್ರ ತಮಿಳು ಚಿತ್ರದ ರಿಮೇಕ್ ಅಂತ ಹೇಳಲಾಗ್ತಿದೆ. ಚಿತ್ರವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ನಿರ್ಮಾಣ ಮಾಡುತ್ತಿದ್ದಾರೆ. ಎಆರ್ ಮುರ್ಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ಆದ್ರೆ ಈ ಚಿತ್ರದಲ್ಲಿ ಚಿರಂಜೀವಿ ಜತೆಗೆ ಯಾವ ನಟಿ ಅಭಿನಯಿಸುತ್ತಾರೆ ಎಂಬ ಪ್ರಶ್ನೆ ಇತ್ತು. ಚಿರಂಜೀವಿ ಜತೆಗೆ ನಯನಾತಾರಾ ಹೆಸರು ಕೇಳಿ ಬಂದಿತ್ತು. ಆದರೆ ಫೈನಲ್ ಆಗಿ ಅನುಷ್ಕಾ ಶೆಟ್ಟಿ ಹೆಸರು ಕೇಳಿ ಬಂದಿದೆ. ಅಲ್ಲದೇ ಅನುಷ್ಕಾ ಮತ್ತೆರೆಡು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾಳೆ. ಬಾಹುಬಲಿ-2 ಹಾಗೂ ಬಾಘ್‌ಮತಿ ಚಿತ್ರಗಳಲ್ಲಿ, ಆದರೆ ಈ ಚಿತ್ರಕ್ಕಾಗಿ ಡೇಟ್ಸ್‌ ಅಡ್ಜಸ್ಟ್ ಮಾಡಿಕೊಳ್ಳಲಿದ್ದಾರಂತೆ.

ಈ ಹಿಂದೆ 2006ರಲ್ಲಿ ಚಿತ್ರದಲ್ಲಿ ಚಿರಂಜೀವಿ ಜತೆ ನಟಿಸಿದ್ದ ಅನುಷ್ಕಾ. ಚಿತ್ರದ ಒಂದು ಸಾಂಗ್‌ನಲ್ಲಿ ಮಾತ್ರ ಅನುಷ್ಕಾ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಚಿರಂಜೀವಿ ಜತೆಗೆ ಅನುಷ್ಕಾ ನಟಿಸುತ್ತಿದ್ದಾರೆ.

Comments are closed.