ಮುಂಬೈ

ಪೋಷಕರಿಂದ ಬೇರ್ಪಟ್ಟಿದ್ದ ಅವನಿ ಸಾಮಾಜಿಕ ಜಾಲತಾಣದಿಂದಾಗಿ 20 ನಿಮಿಷದಲ್ಲೇ ತಾಯಿ ಮಡಿಲು ಸೇರಿದಳು !

Pinterest LinkedIn Tumblr

avni

ಮಹಾರಾಷ್ಟ್ರದ ನಾಗಪುರ ರೇಲ್ವೆ ನಿಲ್ದಾಣದಲ್ಲಿ ಪೋಷಕರಿಂದ ಬೇರ್ಪಟ್ಟಿದ್ದ ಬಾಲಕಿ ಅವನಿ ಸಾಮಾಜಿಕ ಜಾಲತಾಣದಿಂದಾಗಿ 20 ನಿಮಿಷದಲ್ಲೇ ತಾಯಿ ಮಡಿಲು ಸೇರುವಂತಾಗಿದೆ.

4 ವರ್ಷದ ಅವನಿ ಪೋಷಕರಿಂದ ಬೇರ್ಪಟ್ಟು ನಿಲ್ದಾಣದಲ್ಲಿ ಅಳುತ್ತಾ ನಿಂತಿದ್ದು ಇದನ್ನು ಗಮನಿಸಿದ ಆರ್ಪಿಎಫ್ ನ ಮಹಿಳಾ ಕಾನ್ಸಟೇಬಲ್ ಬಾಲಕಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ರೇಲ್ವೆ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಅಳುತ್ತ ನಿಂತಿದ್ದ ಬಾಲಕಿಯನ್ನು ಮಹಿಳಾ ಕಾನ್ಸ್ ಟೇಬಲ್ ಹಿಡಿದುಕೊಂಡಿರುವಂತಾ ಫೋಟೋವನ್ನು ಕ್ಲಿಕ್ಕಿಸಿ @RailMinIndia ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಆಗುತ್ತಿದ್ದಂತೆಯೇ ವಾಟ್ಸಾಪ್ ನಲ್ಲಿ ನಿಮಿಷದೊಳಗಾಗಿ 200 ವಾಟ್ಸಾಪ್ ಗ್ರೂಪ್ ನಲ್ಲಿ ಫೋಟೋ ಶೇರ್ ಆಗಿದೆ. ಇನ್ನು ಫೋಟೋ ವೈರಲ್ ಆಗುತ್ತಿದ್ದಂತೆ ಕೊನೆಗೆ ಅವನಿ ಪೋಷಕರಿಗೆ ಮಾಹಿತಿ ಸಿಕ್ಕಿ ಕೇವಲ 20 ನಿಮಿಷದಲ್ಲೇ ಮಗಳನ್ನು ಸೇರುವಂತಾಗಿದೆ.

ಕಳೆದ ಎರಡು ದಿನಗಳ ಹಿಂದಷ್ಟೇ ಇನ್‌ಸ್ಟಾಗ್ರಾಮ್ ಖಾತೆ ತೆರೆದಿದ್ದ ಕೇಂದ್ರ ರೇಲ್ವೆ ಸಚಿವ ಸುರೇಶ್ ಪ್ರಭು ಅವರು ಅವನಿಯ ಫೋಟೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಅಪಲೋಡ್ ಮಾಡಿ, ಬಾಲಕಿಯ ಪೋಷಕರನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದರು.

ಸುರೇಶ್ ಪ್ರಭು ಪೋಸ್ಟ್ ಮಾಡಿದ್ದ ಫೋಟೋವನ್ನು ಒಟ್ಟು 30 ಲಕ್ಷ ಜನರು ವೀಕ್ಷಿಸಿದ್ದು, 32,275 ಜನರು ಇದನ್ನು ಶೇರ್ ಮಾಡಿದ್ದಾರೆ. ಇದು ಹೀಗೆ ಬೆಳೆದುಕೊಂಡು ಹೋಗಿ ಕೊನೆಗೆ ಅವನಿ ಪೋಷಕರು ಪತ್ತೆಯಾಗಿದ್ದಾರೆ.

ಕಳೆದು ಹೋಗಿದ್ದ ಮಗಳನ್ನು ಸುರಕ್ಷಿತವಾಗಿ ತಮ್ಮ ಮಡಿಲು ಸೇರಿಸಿದ ರೇಲ್ವೆ ಇಲಾಖೆ ಸಿಬ್ಬಂದಿಗೆ ಅವನಿ ತಾಯಿ ಸುನೈನಾ ಜೈನ್ ಕೃತಜ್ಞತೆ ತಿಳಿಸಿದ್ದಾರೆ.

Comments are closed.