ಕರ್ನಾಟಕ

ರಜನಿಕಾಂತ್ ಕಿಡ್ನಾಪ್ ಮಾಡಲು ವೀರಪ್ಪನ್ ಸಂಚು ರೂಪಿಸಿದ್ದ: ರಾಮ್ ಗೋಪಾಲ್ ವರ್ಮಾ ಹೊಸ ಬಾಂಬ್

Pinterest LinkedIn Tumblr

rajnikant-Ram Gopal Varma

ನವದೆಹಲಿ: ಕಾಡುಗಳ್ಳ ವೀರಪ್ಪನ್ ತಮಿಳು ಸೂಪರ್ ಸ್ಟಾರ್ ರಜನಿ ಕಾಂತ್ ಅವರನ್ನು ಕಿಡ್ನಾಪ್ ಮಾಡಲು ಸಂಚು ರೂಪಿಸಿದ್ದ ಎಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಸ ಬಾಂಬ್ ಸಿಡಿಸಿದ್ದಾರೆ.

ಇತ್ತೀಚೆಗೆ ವೀರಪ್ಪನ್ ನೈಜ ಜೀವನ ಆಧಾರಿತ ಚಿತ್ರ ತೆರೆಗೆ ತಂದ ಆರ್ ಜಿವಿ, ಡಕಾಯಿತ ವೀರಪ್ಪನ್ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರಂತೆ. ಈ ವೇಳೆ ಹಲವು ಅಪಾಯಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆಯಂತೆ.

ಡಕಾಯಿತ ವೀರಪ್ಪನ ಸೂಪರ್ ಸ್ಟಾರ್ ರಜನಿಕಾಂತ್‌ರನ್ನು ಕಿಡ್ನಾಪ್ ಮಾಡಲು ಸಂಚು ರೂಪಿಸಿದ್ದು. ಆದ್ರೆ ವಾಸ್ತವ್ಯವಾಗಿ ಆತ ಕನ್ನಡ ಖ್ಯಾತ ನಟ ರಾಜಕುಮಾರ್‌ರನ್ನು ಕಿಡ್ನಾಪ್ ಮಾಡುವಲ್ಲಿ ಸಫಲನಾಗಿದ್ದ ಎಂದು ಹೇಳಿದ್ದಾರೆ.

ತಾನು ರಜನಿಕಾಂತ್ ಗಿಂತ ಹೆಚ್ಚು ಜನಪ್ರಿಯ ವ್ಯಕ್ತಿ ಎಂದು ಭಾವಿಸಿದ್ದ ವೀರಪ್ಪನ್ ತನ್ನ ಜೀವನ ಚರಿತ್ರೆ ಆಧರಿತ ಚಿತ್ರ ನಿರ್ಮಾಣ ಮಾಡುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದ ಎಂದು ಆರ್ ಜಿವಿ ಟ್ವೀಟ್ ಮಾಡಿದ್ದಾರೆ.

Comments are closed.