ಮುಂಬೈ

ಹಾಜಿ ಅಲಿ ದರ್ಗಾ ಪ್ರವೇಶ; ತೃಪ್ತಿ ದೇಸಾಯಿಗೆ ಎಐಎಂಐಎಂ ನಾಯಕ ಹಾಕಿದ ಬೆದರಿಕೆ ಏನು….?

Pinterest LinkedIn Tumblr

haji-ali-dargah

ಮುಂಬೈ: ಹಾಜಿ ಅಲಿ ದರ್ಗಾಗೆ ಪ್ರವೇಶ ಮಾಡಲು ಬಂದರೆ ಭೂಮಾತಾ ರಣರಾಗಿಣಿ ಬ್ರಿಗೇಡ್​ನ ಅಧ್ಯಕ್ಷೆ ತೃಪ್ತಿ ದೇಸಾಯಿ ಅವರಿಗೆ ಮಸಿ ಬಳಿಯಲಾಗುತ್ತದೆ ಎಂದು ಎಐಎಂಐಎಂ ನಾಯಕ ಹಜಿ ರಫತ್ ಹುಸೇನ್ ಅವರು ಹೇಳಿದ್ದಾರೆ.

ಶನಿ ಶಿಂಗನಾಪುರ ಮತ್ತು ತ್ರಯಂಬಕೇಶ್ವರ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿರುವ ತೃಪ್ತಿ ದೇಸಾಯಿ ಈಗ ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಹೋರಾಟ ಆರಂಭಿಸಿದ್ದಾರೆ.

ಹೀಗಾಗಿ ತೃಪ್ತಿ ದೇಸಾಯಿಯವರ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ನಾಯಕ ಹುಸೇನ್ ಅವರು, ದರ್ಗಾ ಪ್ರವೇಶ ಮಾಡುವ ನಿರ್ಧಾರವನ್ನು ನಾವು ಸಹಿಸುವುದಿಲ್ಲ. ಮುಂಬೈನಲ್ಲಿರುವ ವಾತಾವರಣವನ್ನು ಹಾಳು ಮಾಡುವ ಪ್ರಯತ್ನ ಇದಾಗಿದೆ. ಒಂದು ವೇಳೆ ಹಾಜಿ ಅಲಿ ದರ್ಗಾ ಪ್ರವೇಶ ಮಾಡಲು ತೃಪ್ತಿ ದೇಸಾಯಿಯವರು ಪ್ರಯತ್ನ ಮಾಡಿದ್ದೇ ಆದರೆ, ಅವರಿಗೆ ಮಸಿ ಬಳಿಯುತ್ತೇವೆಂದು ಹೇಳಿದ್ದಾರೆ.

ತೃಪ್ತಿ ದೇಸಾಯಿ ಮತ್ತು ಇತರ ಹೋರಾಟಗಾರರು ಹಾಜಿ ಅಲಿ ದರ್ಗಾದ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ನಾವು ದರ್ಗಾ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದೇವೆ. ನಾಳೆ ಮುಂದಿನ ಕ್ರಮದ ಕುರಿತು ಚರ್ಚೆ ನಡೆಸುತ್ತೇವೆಂದು ತೃಪ್ತಿ ದೇಸಾಯಿಯವರು ಹೇಳಿಕೊಂಡಿದ್ದಾರೆ.

Write A Comment