ರಾಷ್ಟ್ರೀಯ

ನೆಹರು ಉಡುಗೊರೆ ಪಡೆದಿದ್ದ ಚಿನ್ನ ಲೇಪಿತ ಕತ್ತಿ ಕದ್ದ ಆರೋಪದಲ್ಲಿ ಇಬ್ಬರ ಬಂಧನ

Pinterest LinkedIn Tumblr

Dagger

ನವದೆಹಲಿ: ಸೌದಿ ಅರೇಬಿಯಾ ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ್ದ ಕತ್ತಿಯನ್ನು ಕದ್ದ ಆರೋಪದ ಮೇಲೆ ನೆಹರು ಸ್ಮರಣಾರ್ಥ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಇಬ್ಬರು ಸ್ವಚ್ಛ ಕರ್ಮಿಗಳನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನ ಲೇಪಿತ ಕತ್ತಿಯನ್ನು ಕದ್ದಿರುವ ಆರೋಪದ ಮೇಲೆ ರಾಮ್ ಚುಂದರ್ ಮತ್ತು ಸಂದೀಪ್ ಎಂಬುವವರನ್ನು ಬಂಧಿಸಲಾಗಿದೆ ಮತ್ತು ಕತ್ತಿಯನ್ನು ಅವರಿಂದ ವಶಪಡಿಸಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಸ್ತುಸಂಗ್ರಹಾಲಯದಿಂದ ಕತ್ತಿ ಸೋಮವಾರದಿಂದ ಕಾಣೆಯಾಗಿತ್ತು. “ನಾವು ನೆಹರು ಸ್ಮರಣಾರ್ಥ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಕೆಲಸ ಮಾಡುವ ಇಬ್ಬರು ಸ್ವಚ್ಛ ಕರ್ಮಿಗಳನ್ನು ಬಂಧಿಸಿದ್ದೇವೆ” ಎಂದು ಪೊಲೀಸ್ ಜಂಟಿ ಆಯುಕ್ತ (ಕ್ರೈಮ್ ಬ್ರಾಂಚ್) ರವೀಂದ್ರ ಯಾದವ್ ಹೇಳಿದ್ದಾರೆ.

೬೦ ಜನರನ್ನು ಪ್ರಶ್ನಿಸಿದ ನಂತರ ಈ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೇ ೨೭ ೧೯೬೪ ರಲ್ಲಿ ನೆಹರು ಕೊನೆಯುಸಿರೆಳೆದ ಕೊಠಡಿಯ ಹತ್ತಿರದಲ್ಲೇ ಇರುವ ಉಡುಗೊರೆ ಪ್ರದರ್ಶನ ಮಂದಿರದಲ್ಲಿ ಗಾಜಿನ ಡಬ್ಬದಲ್ಲಿ ಈ ಕತ್ತಿಯನ್ನು ಇರಿಸಲಾಗಿತ್ತು ಎಂದು ವಸ್ತುಸಂಗ್ರಹಾಲಯದ ಮೂಲಗಳು ತಿಳಿಸಿವೆ.

ನೆಹರು ನಿಧನದ ನಂತರ್ ತೀನ್ ಮೂರ್ತಿ ಮಾರ್ಗದಲ್ಲಿರುವ ಅವರ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿತ್ತು.

Write A Comment