ಮಂಗಳೂರು,ಎ.28: ದ.ಕ ಜಿಲ್ಲಾ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಪಾಣಾಜೆ ಕ್ಷೇತ್ರದ ಮೀನಾಕ್ಷಿ ಶಾಂತಿಗೋಡು ಹಾಗೂ ಉಪಾಧ್ಯಕ್ಷರಾಗಿ ಕಟೀಲು ಕ್ಷೇತ್ರದ ಕಸ್ತೂರಿ ಪಂಜ ಅವರು ಅಯ್ಕೆಯಾಗಿರುತ್ತಾರೆ.
ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ್ ಜಾತಿಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು. ಮೀಸಲಾತಿಯ ಹಿನ್ನೆಲೆಯಲ್ಲಿ ಎರಡೂ ಸ್ಥಾನಗಳು ಮಹಿಳೆಯರಿಗೆ ದಕ್ಕಿದ್ದು, ಈ ಮೂಲಕ ಸರಕಾರದ ಹೊಸ ನಿಯಮದ ಪ್ರಕಾರ ನೂತನ ಅಧ್ಯಕ್ಷರು ಐದು ವರ್ಷಗಳ ಅವಧಿಗೆ ಸಚಿವ ಸಂಪುಟ ದರ್ಜೆಯ ಸ್ಥಾನವಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದ.ಕ ಜಿಲ್ಲಾ ಪಂಚಾಯತ್ನ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳೂರಿನ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಪ್ರಾದೇಶಿಕ ಆಯುಕ್ತ ಎ.ಎಂ. ಕುಂಜಪ್ಪ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಪುತ್ತೂರು ತಾಲೂಕಿನ ಪಾಣಾಜೆ ಕ್ಷೇತ್ರದ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷರಾಗಿ ಹಾಗೂ ಮಂಗಳೂರು ತಾಲೂಕು ಕಟೀಲು ಕ್ಷತ್ರೇದ ಕಸ್ತೂರಿ ಪಂಜ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇಂದಿನಿಂದ 2021ರ ಎಪ್ರಿಲ್ 27ರವರೆಗೆ ಇವರು ಅಧಿಕಾರದಲ್ಲಿರುತ್ತಾರೆ ಎಂದು ಚುನಾವಣಾ ಪ್ರಕ್ರಿಯೆ ಬಳಿಕ ಅಯುಕ್ತ ಎ.ಎಂ. ಕುಂಜಪ್ಪ ಪ್ರಕಟಿಸಿದರು. ಈ ಸಂದರ್ಭ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಗಾಯತ್ರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಐ.ಶ್ರೀವಿದ್ಯಾ ಉಪಸ್ಥಿತರಿದ್ದರು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮೀನಾಕ್ಷಿ ಶಾಂತಿಗೋಡು ಮತ್ತು ಕಾಂಗ್ರೆಸ್ನಿಂದ ಶೇಖರ ಕುಕ್ಕೇಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಕಸ್ತೂರಿ ಪಂಜ ಮತ್ತು ಕಾಂಗ್ರೆಸ್ನಿಂದ ಅನಿತಾ ಹೇಮನಾಥ ಶೆಟ್ಟಿ ನಾಮಪತ್ರ ಸಲ್ಲಿಸಿದ್ದರು. ನಾಲ್ಕೂ ನಾಮಪತ್ರ ಅಂಗೀಕಾರಗೊಂಡ ಬಳಿಕ ಪರಸ್ಪರ ಪರ- ವಿರೋಧವಾಗಿ ಕೈ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಹುಮತಗಳಿಸಿರುವ ಬಿಜೆಪಿಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮೀನಾಕ್ಷಿ ಶಾಂತಿಗೋಡು ಮತ್ತು ಉಪಾಧ್ಯಕ್ಷೆ ಅಭ್ಯರ್ಥಿ ಕಸ್ತೂರಿ ಪಂಜ ತಲಾ 21 ಮತಗಳನ್ನು ವಿಜಯಯಾದರೆ, ಪ್ರತಿಪಕ್ಷ ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶೇಖರ ಕುಕ್ಕೇಡಿ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅನಿತಾ ಹೇಮನಾಥ ಶೆಟ್ಟಿ ಲಾ 15 ಮತಗಳನ್ನು ಪಡೆದರು.
ಚುನಾವಣೆಯ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಸುಚರಿತ ಶೆಟ್ಟಿ, ಎಂ.ಎಸ್.ಮುಹಮ್ಮದ್, ಶಾಹುಲ್ ಹಮೀದ್, ಚಂದ್ರಪ್ರಕಾಶ್, ಕೊರಗಪ್ಪ ನಾಯ್ಕಿ, ಅನಿತಾ ಹೇಮನಾಥ ಶೆಟ್ಟಿ, ಮಮತಾ ಡಿ.ಎಸ್.ಗಟ್ಟಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ಸಿಂಹ ನಾಯಕ್, ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್, ಮುಖಂಡರಾದ ಸಂಜೀವ ಮಠಂದೂರು, ಸತೀಶ್ ಕುಂಪಲ, ಸಂತೋಷ್ ಕುಮಾರ್ ರೈ ಬೋಳಿಯಾರ್, ಈಶ್ವರ ಕಟೀಲ್, ಸತೀಶ್ ಕುಂಪಲ ಮೊದಲಾದವರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಪರಿಚಯ : ಮೀನಾಕ್ಷಿ ಕೆ
ಹೆಸರು : ಮೀನಾಕ್ಷಿ ಕೆ. (38 ವರ್ಷ)
ಗಂಡನ ಹೆಸರು : ಬಾಬು ಎ. (ಕೃಷಿ)
ವಿಳಾಸ : ಅಳಕೆ ಮನೆ, ಶಾಂತಿಗೋಡು ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು
ಹುಟ್ಟೂರು : ಐತೂರು ಗ್ರಾಮ ಕೆಳಗಿನ ಬೀಡುಮಜಲು ಮನೆ
ತಂದೆ ತಾಯಿ : : ಚೋಮ ಪಿ.- ರೈಲ್ವೆ ಇಲಾಖೆ ಉದ್ಯೋಗಿ ಅಂಗಾರು -ರವರ 7 ಮಕ್ಕಳಲ್ಲಿ 5 ಗಂಡು, 2 ಹೆಣ್ಣು, 1ನೇಯವರು
ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ. (ದ.ಕ.ಜಿ.ಪಂ.ಹಿ.ಪ್ರಾ.ಶಾಲೆ, ಕೊಂಬಾರು 1ರಿಂದ 7, 7ರಿಂದ 10 ಬೆಸೆಂಟ್ ಪದವಿ ಪೂರ್ವ ಕಾಲೇಜು ಮಂಗಳೂರು.
ವಿವಾಹ : 1995 ರಲ್ಲಿ ವಿವಾಹ. 2 ಗಂಡು ಮಕ್ಕಳು: 2nd year ಡಿಪ್ಲೊಮಾ ಹಿರಿಯ, 2nd ಪಿಯುಸಿ ಕಿರಿಯ
: 2000ರಲ್ಲಿ ತಾಲೂಕು ಪಂಚಾಯತ್ ಸ್ಪರ್ಧೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘದಲ್ಲಿ ಸದಸ್ಯೆ ಕಾರ್ಯದರ್ಶಿ 5 ವರ್ಷದಿಂದ ಆಶಾ ಕಾರ್ಯಕರ್ತೆ
ದೂರವಾಣಿ : 9632587950
——————–
ಪರಿಚಯ : ಕಸ್ತೂರಿ ಪಂಜ
ಹೆಸರು : ಕಸ್ತೂರಿ ಪಂಜ
ಗಂಡನ ಹೆಸರು : ಹೇಮಚಂದ್ರ (ನಿವೃತ್ತ ಬ್ಯಾಂಕ್ ಮ್ಯಾನೇಜರ್)
ಹುಟ್ಟಿದ ದಿನಾಂಕ : 26.02.1967
ವಿಳಾಸ : ‘ಮಾತೃಶ್ರೀ ಕೃಪಾ’, 10ನೇ ತೋಕೂರು ಗ್ರಾಮ ಮತ್ತು ಅಂಚೆ, ಮಂಗಳೂರು ತಾಲೂಕು.
ಹುಟ್ಟೂರು : ಪಕ್ಷಿಕೆರೆ ಪಂಜ
ತಂದೆ ತಾಯಿ : : ಕರಿಯ ಮೂಲ್ಯ ಮೀನಾ
ವಿದ್ಯಾಭ್ಯಾಸ : ಎಸ್.ಎಸ್.ಎಲ್.ಸಿ
ವೃತ್ತಿ : ಗೃಹಿಣಿ
: ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯೆ. 16 ವರ್ಷ ಕೆಮ್ರಾಲ್ ಗ್ರಾಮ ಪಂಚಾಯತ್ ಸದಸ್ಯೆ, (24 ವರ್ಷ ಉಪಾಧ್ಯಕ್ಷೆ) 2005ರಲ್ಲಿ ಜಿಲ್ಲಾ ಪಂಚಾಯತ್ಗೆ ಸ್ಪರ್ಧೆ. ನವಜ್ಯೋತಿ ಮಹಿಳಾ ಮಂಡಲ ಪಂಜ ಕೊಕುಡೆ ಇದರ ಅಧ್ಯಕ್ಷೆ ಬಿಜೆಪಿ ಮೂಡಬಿದ್ರೆ ಮಹಿಳಾ ಮೋರ್ಚಾ ಅಧ್ಯಕ್ಷೆ, ಜಿಲ್ಲಾ ಕಾರ್ಯದರ್ಶಿ ಮೂಡಬಿದ್ರೆ ಮಂಡಲ ಮಾಜಿ ಅಧ್ಯಕ್ಷೆ ಜಿಲ್ಲಾ ಉಪಾಧ್ಯಕ್ಷೆ ಟೆಲಿಕಾಂ ಸಲಹಾ ಸಮಿತಿ ಮಾಜಿ ಸದಸ್ಯೆ ಬಪ್ಪನಾಡು ವಿವಿದೋದ್ದೇಶ ಸೌಹಾರ್ಧ ಸಹಕಾರಿ ಸಂಘದ ಸದಸ್ಯೆ. ಮಂಗಳೂರು ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯೆ ಜಿಲ್ಲಾ ಕೆಡಿಪಿ ಸಮಿತಿ ಮಾಜಿ ಸದಸ್ಯೆ ಮಂಗಳೂರು ಆಕಾಶವಾಣಿ ಕಲಾವಿದೆ, ಕವಯತ್ರಿ ಧರ್ವಸ್ಥಳ ಸ್ವಸಹಾಯ ಸಂಘ ಪಡುಪಣಂಬೂರು ತೋಕೂರು ಒಕ್ಕೂಟ ಅಧ್ಯಕ್ಷೆ
ದೂರವಾಣಿ : 9401208611.
ಕಸ್ತೂರಿ ಪಂಜ ಅವರು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಹೇಮಚಂದ್ರ ಅವರ ಪತ್ನಿಯಾಗಿದ್ದು, ಎಸ್ಎಸ್ಎಲ್ ವಿದ್ಯಾಭ್ಯಾಸ ಹೊಂದಿದ್ದಾರೆ. ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾಗಿದ್ದು, ಹಿಂದೆ ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಬಿಜೆಪಿಯಲ್ಲಿ ಮೂಡುಬಿದಿರೆ ಮಂಡಲ ಅಧ್ಯಕ್ಷೆ ಸಹಿತ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ