ಮನೋರಂಜನೆ

ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನ ದಿಂದ ನಾನು ಪ್ರಭಾವಿತನಾಗಿದ್ದೇನೆ: ಶಾರೂಖ್ ಖಾನ್

Pinterest LinkedIn Tumblr

sharukh

ಮುಂಬಯಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನ ದಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಹೇಳಿದ್ದಾರೆ.

ಪಿಎಂ ಮೋದಿಯವರ ಮುಂದಾಳತ್ವ ಹಾಗೂ ಮೇಕ್ ಇನ್ ಇಂಡಿಯಾ ತಂತ್ರಜ್ಞಾನದ ಅಳವಡಿಕೆ ಯಿಂದ ಬಾಲಿವುಡ್‌ನ ಕಿಂಗ್ ಖಾನ್ ಶಾರೂಖ್ ತಾವು ಪ್ರೇರೇಪಿತರಾಗಿರುವುದಾಗಿ ಹೇಳಿದ್ದಾರೆ.

ಮೇಕ್ ಇನ್ ಇಂಡಿಯಾ ದೇಶ ಹಾಗೂ ವಿದೇಶಗಳಲ್ಲಿ ಸಾಕಷ್ಟು ಪ್ರಭಾವ ಮೂಡಿಸಿದ್ದು, ಉದ್ಯೋಗವಕಾಶಗಳನ್ನು, ಕೌಶಲ್ಯಗಳನ್ನು ಹೆಚ್ಚಿಸುವ ಮೂಲಕ ಸಹಾಯಕಾರಿಯಾಗಿದೆ ಎಂದು ಪುಸ್ತಕ ಬಿಡುಗಡೆ ಸಮಾರಂಭದ ವೇಳೆ ಶಾರೂಖ್ ಖಾನ್ ಹೇಳಿದ್ದಾರೆ.

ನಮ್ಮ ಮುಂದಿನ ಪೀಳಿಗೆಗಾಗಿ ಉತ್ತಮ ತಂತ್ರಜ್ಞಾನ ಹೊಂದುವುದು ಅವಶ್ಯಕವಾಗಿದೆ ಎಂದು ಶಾರೂಖ್ ತಿಳಿಸಿದ್ದಾರೆ. ಇದೇ ವೇಳೆ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫರ್ನಾಡಿಸ್, ಬಿಜೆಪಿ ಸದಸ್ಯರು ಭಾಗಿಯಾಗಿದ್ದರು.

ಇನ್ನೂ ಇದೇ ವೇಳೆ ಮಾತನಾಡಿರುವ ಶಾರೂಖ್, ನವೆಂಬರ್‌ನಲ್ಲಿ ಬಾಲಿವುಡ್ ನಿಂದ ಆಗತ್ಯವಾದ ಬೆಂಬಲವನ್ನು ಮೇಕ್ ಇನ್ ಇಂಡಿಯಾಗೆ ನೀಡಲಾಗುವುದು ಎಂದು ತಿಳಿಸಿದರು.

Write A Comment