
ನವದೆಹಲಿ: ಗಡಿ ಕಾಯೋ ಯೋಧರಿಗೆ ಒಂದು ಗುಡ್ ನ್ಯೂಸ್. ಅದು ಏನಾಪ್ಪಾ ಅಂದ್ರೆ ನವವಿವಾಹಿತ ಯೋಧರು ಇನ್ಮುಂದೆ ತಮ್ಮ ಪತ್ನಿಯನ್ನು ತಮ್ಮೊಟ್ಟಿಗೆ ಕರೆದುಕೊಂಡು ಒಂದು ವರ್ಷ ಒಟ್ಟಿಗೆ ವಾಸ ಇರಬಹುದಾದ ಅವಕಾಶ ಮಾಡಿಕೊಡಲು ಬಿಎಸ್ಎಫ್ ತೀರ್ಮಾನಿಸಿದೆ.
ಈ ನಿರ್ಧಾರದ ಪ್ರಕಾರ ನವ ವಿವಾಹಿತ ಜೋಡಿ ಗಡಿ ಪ್ರದೇಶದಲ್ಲಿ ಒಂದು ವರ್ಷಗಳ ಕಾಲ ಒಟ್ಟಿಗೆ ವಾಸವಿರಬಹುದಾಗಿದೆ. ವಿವಾಹದ ಆರಂಭದ ದಿನಗಳಲ್ಲೇ ಯೋಧರು ತಮ್ಮ ಪತ್ನಿಯನ್ನು ದೂರ ಮಾಡುವುದು ಅವರ ಕರ್ತವ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಅವರನ್ನು ಕನಿಷ್ಠ 1 ವರ್ಷಗಳ ಕಾಲ ಜೊತೆಯಲ್ಲೇ ಇರಲು ಅವಕಾಶ ಮಾಡಿಕೊಡಲು ನಿರ್ಧರಿಸಿರುವುದಾಗಿ ಎಂದು ಬಿಎಸ್ಎಫ್ನ ಡಿಜಿ ಕೆ.ಕೆ ಶರ್ಮಾ ಹೇಳಿದ್ದಾರೆ.
ಇದಲ್ಲದೇ ಹೊಸ ಜೋಡಿಗಳಿಗಾಗಿ ಎಷ್ಟು ಮನೆಗಳನ್ನ ನಿರ್ಮಿಸಬೇಕಾಗುತ್ತದೆ ಎಂಬುದರ ಅಧ್ಯಯನಕ್ಕೂ ಸೂಚಿಸಲಾಗಿದೆ. ಸೈನಿಕರು ವಿವಾಹದ ಕೂಡಲೇ ವಾಪಸ್ಸಾಗಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಿರುವ ಬಗ್ಗೆ ಬಹಳ ದಿನಗಳಿಂದಲೂ ಅಸಮಾಧಾನ ಇತ್ತು. ಕುಟುಂಬದ ಜೊತೆಗಿದ್ದರೆ ಯೋಧರ ಕಾರ್ಯವೈಖರಿ ಹೆಚ್ಚುವುದು ಎಂದು ಬಿಎಸ್ಎಫ್ ಹಿರಿಯ ಐಜಿಬಿ ಮೇಘ್ವಾಲ್ ತಿಳಿಸಿದ್ದಾರೆ.