ಮನೋರಂಜನೆ

ಮಹಾರಾಷ್ಟ್ರದ ಬರ ಪೀಡಿತ ಗ್ರಾಮಗಳನ್ನು ಅಮೀರ್ ಖಾನ್ ದತ್ತು ತೆಗೆದುಕೊಂಡಿಲ್ಲ!

Pinterest LinkedIn Tumblr

Aamir-Khan_cuteಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮಹಾರಾಷ್ಟ್ರದ ಬರ ಪೀಡಿತ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಮೀರ್ ಖಾನ್ ಅವರ ಆಪ್ತಮೂಲಗಳು ಈ ಸುದ್ದಿ ಸತ್ಯಕ್ಕೆ ದೂರವಾದುದು ಎಂದಿವೆ.
ಅಮೀರ್ ಖಾನ್ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಬರ ಪೀಡಿತ ತಾಲ್ ಮತ್ತು ಕೊರೆಗಾಂವ್ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಮೀರ್ ಆಪ್ತಮೂಲಗಳು ಆತ ಯಾವುದೇ ಗ್ರಾಮಗಳನ್ನು ದತ್ತು ತೆಗೆದುಕೊಂಡಿಲ್ಲ. ಆದರೆ ಪಾನಿ ಫೌಂಡೇಷನ್ ಎಂಬ ಎನ್‌ಜಿಒ ಜತೆ ಸೇರಿ ಬರಪೀಡಿತ ಪ್ರದೇಶಗಳಲ್ಲಿರುವ 120 ಗ್ರಾಮಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದಿವೆ.
ಆದಾಗ್ಯೂ, ಅಮೀರ್ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬ ವದಂತಿ ಹಬ್ಬಿದ್ದು ಹೇಗೆ ಎಂಬುದು ತಿಳಿದು ಬಂದಿಲ್ಲ.

Write A Comment