ರಾಷ್ಟ್ರೀಯ

ಅಸಾರಾಂ ಬಾಪು, ಪುತ್ರ ನಾರಾಯಣ ಸಾಯಿಗೆ 750 ಕೋಟಿ ದಂಡ

Pinterest LinkedIn Tumblr

asaramಸೂರತ್: ಅತ್ಯಾಚಾರ ಆರೋಪ ಎದುರಿಸುತ್ತಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಹಾಗೂ ಅವರ ಪುತ್ರ ನಾರಾಯಣ ಸಾಯಿಗೆ ಆದಾಯ ತೆರಿಗೆ ಇಲಾಖೆ 750 ಕೋಟಿ ರುಪಾಯಿ ದಂಡ ವಿಧಿಸಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಸಾರಾಂ ಬಾಪು ಹಾಗೂ ನಾರಾಯಣ ಸಾಯಿ ಆಶ್ರಮಗಳ ಮೇಲೆ ದಾಳಿ ನಡೆಸಿ ಕೋಟ್ಯಾಂತರ ರುಪಾಯಿ ನಗದು ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದರು ಎಂದು ಸಹಾಯಕ ಪೊಲೀಸ್ ಆಯುಕ್ತ ಮುಕೇಶ್ ಪಟೇಲ್ ಅವರು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಪಟೇಲ್ ಪ್ರಕಾರ, ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸುಮಾರು 42 ಬ್ಯಾಗ್ ಗಳಲ್ಲಿ ನೂರಾರು ಕೋಟಿ ರುಪಾಯಿ ವಶಪಡಿಸಿಕೊಂಡಿದ್ದು, ತೆರಿಗೆ ವಂಚಿಸಿದ್ದಕ್ಕಾಗಿ 750 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ.
ಅಸಾರಾಂ ಬಾಪು ವಕೀಲ ಕಲ್ಪೇಶ್ ದೇಸಾಯಿ ಸಹ 750 ಕೋಟಿ ರುಪಾಯಿ ದಂಡ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ.

Write A Comment