ಮುಂಬೈ

ಸ್ವತಃ ನಟಿಸಿರುವ ‘ಸಚಿನ್’ ಚಿತ್ರದ ಮೊದಲ ಪೋಸ್ಟರ್ ಆವರಣ

Pinterest LinkedIn Tumblr

saಮುಂಬೈ: ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಆತ್ಮಕಥೆ ಆಧಾರಿತ ಸಿನಿಮಾ ‘ಸಚಿನ್’ ಬಿಡುಗಡೆಯಾಗುತ್ತಿದ್ದು, ಸಿನಿಮಾದ ಮೊದಲ ಪೋಸ್ಟರ್​ನ್ನು ಸಚಿನ್ ರೀಟ್ವಿಟ್ ಮಾಡ್ದಿದಾರೆ.

ಸುರೇಶ್ ರೈನಾ, ರೋಹಿತ್ ಶರ್ವ ಮ್ತತು ವಿರೇಂದ್ರ ಸೆಹ್ವಾಗ್ ‘ಸಚಿನ್’ ಸಿನಿಮಾ ಪೋಸ್ಟರ್​ನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘55 ಡೇಸ್ ಆಫ್ ಟ್ರೖೆನಿಂಗ್, 1 ಪೇರ್ ಆಫ್ ಟ್ರೋಸರ್ಸ್, ದಿ ಸಚಿನ್ ಸ್ಟೋರಿ’ ಎಂಬ ಸಾಲುಗಳುಳ್ಳ ಸಚಿನ್ ಚಿತ್ರದಲ್ಲಿ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ನಟಿಸಿರುವುದು ವಿಶೇಷ. ಸುಮಾರು 5 ದೇಶಗಳಲ್ಲಿ 30 ತಿಂಗಳುಗಳ ಕಾಲ ಚಿತ್ರೀಕರಣ ನಡೆದಿದೆ.

ಚಿತ್ರದ ಟ್ರೖೆಲರ್ ಏಪ್ರಿಲ್ 14ರಂದು ಬಿಡುಗಡೆಯಾಗಲಿದ್ದು, ಬಾಲಿವುಡ್ ಖ್ಯಾತನಾಮ ಶಾರುಖ್ ತಾವು ಸಿಚಿನ್ ಚಿತ್ರ ನೋಡಲು ಕಾತರರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ. ಮುಂಬೈ ಮೂಲದ 200 ನಾಟೌಟ್ ಈ ಚಿತ್ರವನ್ನು ನಿರ್ವಿುಸಿದೆ. ಸಚಿನ್ 200 ಟೆಸ್ಟ್​ಗಳನ್ನು ಆಡಿ 100 ಸೆಂಚುರಿಗಳನ್ನು ಬಾರಿಸಿ ನಿವೃತ್ತರಾಗಿದ್ದಾರೆ. ಒಟ್ಟಾರೆ 664 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಸಚಿನ್ 34,357 ರನ್​ಗಳನ್ನು ಕಲೆಹಾಕಿದ್ದಾರೆ.

Write A Comment