ಕರ್ನಾಟಕ

ಅಧ್ಯಾಪಕರ ಸಾಮರ್ಥ್ಯದ ಬಗ್ಗೆ ವಿದ್ಯಾರ್ಥಿಗಳು ಮತ ಹಾಕುವಂತಹ ವ್ಯವಸ್ಥೆಯಾಗಬೇಕು : ನಾರಾಯಣಮೂರ್ತಿ

Pinterest LinkedIn Tumblr

adyaಮೈಸೂರು,ಏ.11-ಅಧ್ಯಾಪಕರ ಸಾಮರ್ಥ್ಯದ ಬಗ್ಗೆ ವಿದ್ಯಾರ್ಥಿಗಳು ಮತ ಹಾಕುವಂತಹ ವ್ಯವಸ್ಥೆಯಾಗಬೇಕು, ಈ ಬಗ್ಗೆ ದೇಶಾದ್ಯಂತ ಒಂದು ಸಮಿತಿ ರಚಿಸಬೇಕಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷ ನಾರಾಯಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜ್ಞಾವಂತ ಪೋಷಕರು, ಶಿಕ್ಷಣ ತಜ್ಞರು, ಉಪನ್ಯಾಸಕರನ್ನೊಳಗೊಂಡ ಸಮಿತಿಯನ್ನು ದೇಶಾದ್ಯಂತ ರಚಿಸಿದರೆ ಈ ವ್ಯವಸ್ಥೆಯಿಂದ ಶಿಕ್ಷಣ ಕ್ಷೇತ್ರವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದರು.

ಶಿಕ್ಷಣವೆಂದರೆ ಕಲಿಕೆಯನ್ನು ಕಲಿಯುತ್ತಿರುವುದು ಎಂದರ್ಥ. ಶಿಕ್ಷಣದಿಂದ ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗಬೇಕು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನು ಸಮಾಜದಲ್ಲಿ ಸಮಾನವಾಗಿ ಉತ್ತಮ ಬದುಕು ನಡೆಸುವಂತಾಗಬೇಕು, ಅಂತಹ ಕೆಲಸಕ್ಕೆ ಶಿಕ್ಷಣ ಸಹಕಾರಿಯಾಗಬೇಕು ಎಂದರು. ಅನೇಕರು ಶಿಕ್ಷಣ ದುಬಾರಿ ಎಂದು ತಿಳಿದಿದ್ದಾರೆ. ಆದರೆ ಶಿಕ್ಷಣ ಎಂಬುದು ದುಬಾರಿಯಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ಉತ್ತಮ ಸೇವಾ ವೇತನ ಹಾಗೂ ಸೌಲಭ್ಯಗಳು ದೊರೆಯುವಂತಾದಾಗ ಮಾತ್ರ ಶಿಕ್ಷಣದ ಗುಣಮಟ್ಟವು ಹೆಚ್ಚಾಗಲಿದೆ ಎಂದು ಅವರು ಹೇಳಿದರು.

Write A Comment