ಕರ್ನಾಟಕ

ವಿಧಾನಸೌಧದಲ್ಲೇ ಕಳ್ಳತನ! ಮಹತ್ವದ ದಾಖಲೆಗಳನ್ನೇ ಕದ್ದೊಯ್ದರು…

Pinterest LinkedIn Tumblr

vidhansouda-karnatakaಬೆಂಗಳೂರು: ವಿಧಾನಪರಿಷತ್ ಸಚಿವಾಲಯದ ಆಡಳಿತ ಶಾಖೆ ಕಚೇರಿಯಲ್ಲಿರುವ 159ನೇ ಕೊಠಡಿಯ ಬೀಗ ಮುರಿದು ರಹಸ್ಯ ಕಡತಗಳನ್ನು ಕಳವು ಮಾಡಿರುವ ಘಟನೆ ಭಾನುವಾರ ನಡೆದಿದೆ.

ಭಾನುವಾರ ರಜಾದಿನವಾಗಿದ್ದು…ಸಚಿವಾಲಯದಲ್ಲಿದ್ದ ಮಹತ್ವದ ದಾಖಲೆಗಳನ್ನು ಕಳವು ಮಾಡಿದ್ದು, ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಪರಿಷತ್ ಸಚಿವಾಲಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನನ್ನ ಕೊಠಡಿಯ ಬೀಗ ಮುರಿದು ಮಹತ್ವದ ದಾಖಲೆ ಕಳವು ಮಾಡಿದ್ದಾರೆ. ಯಾವ ಕಡತಗಳು ನಾಪತ್ತೆಯಾಗಿವೆ ಎಂಬುದು ತಿಳಿದು ಬಂದಿಲ್ಲ. ಯಾರು ಕಳ್ಳತನ ಮಾಡಿದ್ದಾರೆಂಬುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ದೂರು ನೀಡಿರುವುದಾಗಿ ಪರಿಷತ್ ಅಧೀನ ಕಾರ್ಯದರ್ಶಿ ಕೆಸಿ ಪ್ರಭು ಹೇಳಿದ್ದಾರೆ.
-ಉದಯವಾಣಿ

Write A Comment