ಮುಂಬೈ

ನಿನ್ನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ: ಒವೈಸಿಗೆ ರಾಜ್ ಠಾಕ್ರೆ ಸವಾಲು…ಏನಿದು ವಿಷಯ ಇಲ್ಲಿದೆ ಓದಿ…

Pinterest LinkedIn Tumblr

raj-thackeray

ಮುಂಬೈ: ಭಾರತ ಮಾತಾ ಕೀ ಜೈ ವಿವಾದ ತಾರಕಕ್ಕೇರಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ್ದ ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ ಎಂದು ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ ಬಿಜೆಪಿ, ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಶಿವಸೇನೆ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದ ಕಿತ್ತಾಟದಲ್ಲಿ ತೊಡಗಿದ್ದು, ರಾಜ್ಯ ಏಳ್ಗೆಯನ್ನೇ ಮರೆತುಬಿಟ್ಟಿವೆ ಎಂದು ಕಿಡಿಕಾರಿದರು. ಇದೇ ವೇಳೆ ಒವೈಸಿ ಸಹೋದರರ ವಿರುದ್ಧ ಕಿಡಿಕಾರಿದ ರಾಜ್ ಠಾಕ್ರೆ ಒವೈಸಿ ಸಹೋದರರು ಬಿಜೆಪಿಯಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಅಂತೆಯೇ ಭಾರತ ಮಾತಾ ಕೀ ಜೈ ವಿವಾದ ಸಂಬಂಧ ಮಾತನಾಡಿದ ರಾಜ್ ಠಾಕ್ರೆ, ಒವೈಸಿ ಮಹಾರಾಷ್ಟ್ರಕ್ಕೆ ಬಂದರೆ ಆತನ ಕುತ್ತಿಗೆ ಮೇಲೆ ನಾನು ಕತ್ತಿ ಇಡುತ್ತೇನೆ ಎಂದು ಹೇಳಿದರು.

ಈ ಹಿಂದೆ ಇದೇ ವಿವಾದ ಸಂಬಂಧ ಹೇಳಿಕೆ ನೀಡಿದ್ದ ಎಂಐಎಂ ಸಂಸ್ಥಾಪಕ ಅಸಾದುದ್ದೀನ್ ಒವೈಸಿ, ನನ್ನ ಕುತ್ತಿಗೆ ಮೇಲೆ ಕತ್ತಿ ಇಟ್ಟರೂ ನಾನು ಭಾರತ ಮಾತಾ ಕಿ ಜೈ ಎನ್ನಲಾರೆ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಒವೈಸಿ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Write A Comment