ಮುಂಬೈ

ಮಲ್ಯ ಜೆಟ್ ಗುಜರಿ ಬೆಲೆಗೆ ಮಾರಾಟ

Pinterest LinkedIn Tumblr

Mallya-jet

ಮುಂಬೈ, ಮಾ. ೨೮- ಮದ್ಯದ ದೊರೆ ವಿಜಯ್ ಮಲ್ಯರ 11 ಆಸನಗಳ ಐಷಾರಾಮಿ ಖಾಸಗಿ ಜೆಟ್ ವಿಮಾನವನ್ನು ಹರಾಜು ಹಾಕಿದ್ದು, ಅದು ಕೇವಲ 22 ಲಕ್ಷ ರೂ. ಗಳಿಗೆ ಮಾರಾಟವಾಗಿದೆ!.

ಸೈಲೆಂಟ್ ಎಂಟರ್‌ಪ್ರೈಸಸ್ ಎಂಬ ಸಂಸ್ಥೆ ವಿಮಾನವನ್ನು ಖರೀದಿಸಿದ್ದು, ತಾನು ತೆತ್ತ ಹಣವನ್ನು ಮರಳಿ ಪಡೆಯಲು ವಿಮಾನದ ಬಿಡಿಭಾಗಗಳನ್ನು ಗುಜರಿಗೆ ಹಾಕಲಿದೆಯೆಂದು ಮುಂಬೈನ ಪತ್ರಿಕೆಯೊಂದು ವರದಿ ಮಾಡಿದೆ.

ನಿಲ್ದಾಣದಲ್ಲೇ ಹರಾಜು
ಕಿಂಗ್ ಫಿಷರ್ ಏರ್‌ಲೈನ್ಸ್‌ನ ಸಾಲದ ಹಣಕ್ಕಾಗಿ ಮಲ್ಯರ ವಿಮಾನವನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹರಾಜು ಹಾಕಿತ್ತು.
ವಿಮಾನದ ಭಾಗಗಳನ್ನು ಕಳಚುವ ಕೆಲಸ ಮಾ. 6 ರಂದು ಆರಂಭವಾಗಿದ್ದು, ಮುಂದಿನ ವಾರ ಕೊನೆಗೊಳ್ಳಲಿದೆ. ಕೆಲಸಗಾರರು ದಿನಕ್ಕೆ 8 ಗಂಟೆ ಕಾಲ ಈ ಕೆಲಸದಲ್ಲಿ ನಿರತರಾಗಿದ್ದಾರೆ.

ಇನ್ನೂ 4-5 ದಿನ
ಮಧ್ಯಮ ಗಾತ್ರದ ಜೆಟ್ ವಿಮಾನದ ಇಂಜಿನ್ ಕಳಚುವುದೇ ಅತ್ಯಂತ ಕಷ್ಟದ ಕೆಲಸ. 8 ದಿನಗಳಿಂದ ಈ ಕೆಲಸ ಮಾಡುತ್ತಿದ್ದೇವೆ. ಮುಗಿಯಲು ಇನ್ನೂ ನಾಲ್ಕೈದು ದಿನಗಳು ಬೇಕಾಗುತ್ತವೆ ಎಂದು ಮೇಲ್ವಿಚಾರಕರೊಬ್ಬರು ಹೇಳಿದ್ದು, ಒಮ್ಮೆ ಬಿಡಿಭಾಗಗಳನ್ನು ಕಳಚಿದ ನಂತರ ಅದನ್ನು ಕುರ್ಲಾದಲ್ಲಿರುವ ಖೈರಾನಿ ರಸ್ತೆಯಲ್ಲಿರುವ ಗುಜರಿ ಕೇಂದ್ರಕ್ಕೆ ಕೊಂಡೊಯ್ದು ಇಡಲಾಗುವುದು.
ಮುಂಬೈನ ವಿಲೆ ಪಾರ್ಲೆಯಲ್ಲಿರುವ ಮಲ್ಯರ 100 ಕೋಟಿ ರೂ. ಗಳ ಕಿಂಗ್ ಫಿಷರ್ ಹೌಸನ್ನು ಹರಾಜು ಹಾಕುವ ಸಾಧ್ಯತೆಯಿದೆ.

Write A Comment