ರಾಷ್ಟ್ರೀಯ

ಮನದ ಬೇಡಿಕೆ ಈಡೇರಿಸುವ ಬುಲ್ಲೆಟ್ ಬಾಬಾ !

Pinterest LinkedIn Tumblr

bike

ಪ್ರತಿಯೊಬ್ಬ ಪುರುಷನಿಗೂ ಸಹ ಬೈಕ್ ಎಂದರೆ ತುಂಬಾ ಇಷ್ಟವಿರುತ್ತದೆ. ಅದರಲ್ಲೂ ಅದು ಬುಲ್ಲೆಟ್ ಆಗಿದ್ದರೆ ಅದರ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಅದೇ ರೀತಿ ಓಂ ರಾಥೋರ್‌ಗೂ ಸಹ ತನ್ನ ಬುಲ್ಲೆಟ್ ಎಂದರೆ ಪ್ರಂಚ ಪ್ರಾಣ. ಅದಕ್ಕಾಗಿ ಮರಣದ ನಂತರವೂ ಅವರು ತನ್ನ ಬುಲ್ಲೆಟ್‌ನ ಜೊತೆ ಇರೋದನ್ನು ಬಿಡಲಿಲ್ಲ. ಅದಕ್ಕಾಗಿಯೇ ರಾಜಸ್ಥಾನದಲ್ಲಿ ಈ ಬುಲ್ಲೆಟ್‌ಗಾಗಿ ಓಮ್ ಬನ್ನಾ ಮಂದಿರ ನಿರ್ಮಾಣ ಮಾಡಲಾಗಿದೆ.

ಈ ದೇವಾಲಯ ಜೋದ್‌ಪುರದಲ್ಲಿದೆ. ಭಕ್ತಾಧಿಗಳು ತಮ್ಮ ಪ್ರಯಾಣ ಸುಗಮವಾಗಲಿ ಎಂದು ಈ ದೇವರಲ್ಲಿ ಪ್ರಾರ್ಥಿಸಿ ನೂರು ಪ್ರದಕ್ಷಿಣೆ ಹಾಕುತ್ತಾರೆ ಹಾಗೂ ಈ ದೇವರಿಗೆ ಮದ್ಯ ಕೊಡುವುದಾಗಿ ಪ್ರಾರ್ಥಿಸುತ್ತಾರೆ.

ಈ ದೇವಾಲಯಕ್ಕೆ ೧೯೯೧ರಿಂದ ಐತಿಹಾಸಿಕ ಮಹತ್ವವಿದೆ. ೧೯೯೧ರಲ್ಲಿ ಆ ಊರಿನ ಹಿರಿಯ ಜೋಗ್ ಸಿಂಗ್ ಅವರ ಪುತ್ರ ಓಂ ಸಿಂಗ್ ರಾಥೋರ್ ಬೈಕ್ ಅಪಘಾತದಲ್ಲಿ ಮೃತರಾದರು. ಈತನ ಬೈಕ್ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿದ್ದರು. ನಂತರ ಈತನ ಬೈಕ್‌ಅನ್ನು ಪೊಲೀಸರು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದರು.

ಆದರೆ ಅಚ್ಚರಿ ಎಂಬಂತೆ ಆ ಬೈಕ್ ಮತ್ತೆ ಆ ಅಪಘಾತದ ಸ್ಥಳದಲ್ಲೇ ಕಂಡುಬಂದಿತ್ತು.ನಂತರ ಮತ್ತೆ ಪೊಲೀಸರು ಅದನ್ನು ತೆಗೆದುಕೊಂಡು ಪೊಲೀಸ್ ಸ್ಟೇಷನ್‌ಗೆ ಹೋಗಿ ಚೈನ್‌ನಿಂದ ಕಟ್ಟಿಹಾಕಿದ್ದರು. ಆದರೆ ಅವರ ಈ ಕೆಲಸವು ವ್ಯರ್ಥವಾಗಿತ್ತು. ಯಾಕೆಂದರೆ ಮರುದಿನ ಬೆಳಗ್ಗೆ ಬೈಕ್ ಅಪಘಾತ ಸ್ಥಳದಲ್ಲಿ ಪತ್ತೆಯಾಗಿತ್ತು.

ನಂತರದಿಂದ ಈ ಮರವನ್ನು ಬಳೆ ಹೂವುಗಳಿಂದ ಪೂಜಿಸುತ್ತಾರೆ. ಇಲ್ಲಿ ಹೊಗಿ ಪ್ರಾರ್ಥಿಸಿಕೊಂಡರೆ ಮನಸ್ಸಿನ ಎಲ್ಲಾ ಆಕಾಂಕ್ಷೆಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ. ನಿಮಗೂ ಈ ತಾಣ ನೋಡಬೇಕೆಂದರೆ ಜೋದ್‌ಪುರಕ್ಕೆ ಭೇಟಿ ನೀಡಿ.

Write A Comment