ಕರ್ನಾಟಕ

ಉಸಿರುಗಟ್ಟಿಸಿ ಪತ್ನಿ ಕೊಲೆ ಮಾಡಿದವನ ಸೆರೆ

Pinterest LinkedIn Tumblr

21

ಬೆಂಗಳೂರು: ಟಿ ದಾಸರಹಳ್ಳಿಯ ಮಹೇಶ್ವರಮ್ಮ ದೇವಸ್ಥಾನದ ಬಳಿ ಕಳೆದ ಮಾ.೨೪ ರಂದು ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಪತಿಯನ್ನು ಪೀಣ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಂಕದಕಟ್ಟೆಯ ಕಲ್ಲೇಶ್(೨೮)ಬಂಧಿತ ಆರೋಪಿಯಾಗಿದ್ದಾನೆ.ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಂಗಟಗೆರೆ ಮೂಲದ ಕಲ್ಲೇಶ್ ಅಕ್ಕನ ಮಗಳಾದ ಪ್ರಿಯಾಂಕಳನ್ನು ಒಂದೂವರೆ ವರ್ಷದ ಹಿಂದೆವಿವಾಹವಾಗಿದ್ದನು.

ದಾಸರಹಳ್ಳಿಯ ಕಾಲೇಜೊಂದರಲ್ಲಿ ದ್ವಿತಿಯ ಬಿಎ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ ಬೇರೊಬ್ಬರ ಜೊತೆ ಮೊಬೈಲ್ ಮಾತನಾಡುತ್ತಾ ಚಾಟ್ ಮಾಡುತ್ತಿದ್ದಾಳೆ ಎಂದು ಕಲ್ಲೇಶ್ ಜಗಳ ತೆಗೆದು ಕಳೆದ ಕೆಲವು ದಿನಗಳಿಂದ ಆಕೆಯನ್ನು ಬಿಟ್ಟು ಸುಂಕದಕಟೆಯಲ್ಲಿ ವಾಸಿಸುತ್ತಿದ್ದನು.

ಆಗಾಗ ಪತ್ನಿಯ ಮನೆಗೆ ಬರುತ್ತಿದ್ದ ಕಲ್ಲೇಶ್ ಮಾ.೨೪ ರಂದು ಮನೆಯಲ್ಲಿ ಪ್ರಿಯಾಂಕ ಇಬ್ಬಳೇ ಇದ್ದಾಗ ಬಂದು ಆಕೆಯ ಜೊತೆ ಜಗಳ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದನು.

ಪ್ರಕರಣ ದಾಖಲಿಸಿಕೊಂಡ ಕಾರ್ಯಾಚರಣೆ ಕೈಗೊಂಡ ಪೀಣ್ಯ ಪೊಲೀಸರು ಚೆನ್ನೈನಲ್ಲಿ ತಲೆಮರೆಸಿಕೊಂಡ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪತ್ನಿ ಪ್ರಿಯಾಂಕ ತನ್ನ ಬಾಯ್‌ಪ್ರೆಂಡ್ಸ್ ಜೊತೆಯಲ್ಲಿ ವಾಟ್ಸ್‌ಅಪ್‌ನಲ್ಲಿ ಚಾಟ್ ಮಾಡುತ್ತಿದ್ದರಿಂದ ಆಕ್ರೋಶಗೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ

Write A Comment