ಮುಂಬೈ

ಮೌನ ಮುರಿದ ಬಾಲಿವುಡ್ ದಂಪತಿ, ಖಾಸಗಿ ಬದುಕಿಗಾಗಿ ಬೇರ್ಪಡೆ

Pinterest LinkedIn Tumblr

Malaika-Arora-and-Arbaaz-Khan-webಮುಂಬೈ: ಬಾಲಿವುಡ್​ನ ಜನಪ್ರಿಯ ದಂಪತಿ ಸಾಲಿನಲ್ಲಿ ಮಲೈಕ ಅರೋರ ಖಾನ್ ಹಾಗೂ ಅರ್ಬಾಜ್ ಖಾನ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ಮಧ್ಯೆ ಬಿರುಕು ಮೂಡಿದ್ದು, ವಿಚ್ಛೇದನ ಪಡೆಯುತ್ತಾರೆ ಎಂಬ ಉಹಾಪೋಹಗಳು ವ್ಯಾಪಕವಾಗಿ ಹರಡಿದ್ದವು. ಇದೀಗ ಎಲ್ಲಾ ಅಂತೆಕಂತೆಗಳಿಗೆ ಸೋಮವಾರ ಸ್ವತಃ ಮಲೈಕ ಹಾಗೂ ಅರ್ಬಾಜ್ ಸ್ಪಷ್ಟನೆ ಮೂಲಕ ತೆರೆ ಎಳೆದಿದ್ದಾರೆ.

ಹೌದು, ಮಲೈಕ ಹಾಗೂ ಅರ್ಬಾಜ್ ಜಂಟಿ ಹೇಳಿಕೆ ನೀಡಿದ್ದು, ನಮ್ಮ ಖಾಸಗಿ ಬದುಕಿಗೆ ಕುತ್ತು ಬಂದಿದ್ದರಿಂದ ಪರಸ್ಪರ ಒಪ್ಪಿಗೆಯ ಮೇಲೆ ಬೇರ್ಪಡೆಯಾಗಿರುವುದು ನಿಜ. ನಾವು ಪ್ರತ್ಯೇಕವಾಗಿ ನಮ್ಮ ಬದುಕು ರೂಪಿಸುಕೊಳ್ಳುವ ಯತ್ನದಲ್ಲಿದ್ದೇವೆ. ಆದರೆ ನಮ್ಮ ಮೌನದ ಹಿನ್ನೆಲೆಯಲ್ಲಿ ಹರಡುತ್ತಿರುವ ವದಂತಿಗಳು ಕುಟುಂಬದ ವಾತಾವರಣವನ್ನು ಹದಗೆಡಿಸುತ್ತಿವೆ. ಹೀಗಾಗಿ ನಾವು ಈ ಜಂಟಿ ಹೇಳಿಕೆ ನೀಡುತ್ತಿದ್ದೇವೆ. ನಮ್ಮ ಪರವಾಗಿ ಯಾರೂ ಹೇಳಿಕೆ ನೀಡಬೇಕಾಗಿಲ್ಲ, ಮಾಧ್ಯಮ ಮಿತ್ರರೇ ನಮ್ಮನ್ನು ನಮ್ಮಷ್ಟಕ್ಕೆ ಇರಲು ಬಿಟ್ಟುಬಿಡಿ ಎಂದು ತಿಳಿಸಿದ್ದಾರೆ.

ಈ ಹಿಂದೆ ಅರ್ಬಾಜ್ ಸಹೋದರ ಸಲ್ಮಾನ್ ಕೂಡ ಇವರನ್ನು ರಾಜಿ ಮಾಡಿಸಲು ಹಲವು ಪ್ರಯತ್ನ ಮಾಡಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ.

Write A Comment