ಮುಂಬೈ

ಇಂಜಿನ್‌ನಲ್ಲಿ ದೋಷ: ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

Pinterest LinkedIn Tumblr

airindia

ಮುಂಬೈ: ಇಂಜಿನ್‌ನಲ್ಲಿ ಹೊಗೆ ಕಂಡು ಬಂದ ಕಾರಣ ಹೈದ್ರಾಬಾದ್ ಮುಂಬೈ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಸೋಮವಾರ ಬೆಳಗ್ಗೆ ತುರ್ತು ಭೂಸ್ಪರ್ಶ ನಡೆಸಿದೆ.

ಎಐ -620 ವಿಮಾನದಲ್ಲಿ 120 ಪ್ರಯಾಣಿಕರಿದ್ದು, ಅವರನ್ನು ವಿಮಾನದಿಂದ ಇಳಿಸಲಾಗಿದೆ. ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

ಹೈದ್ರಾಬಾದ್‌ನಿಂದ ಮುಂಬೈಗೆ ತಲುಪಿದ ವಿಮಾನ ಲ್ಯಾಂಡಿಂಗ್ ನಂತರ ಪ್ರಯಾಣಿಕರನ್ನು ಇಳಿಸಲು ಟ್ಯಾಕ್ಸಿವೇನಲ್ಲಿ ನಿಂತಿತ್ತು. ಆ ಹೊತ್ತಿನಲ್ಲಿ ಇಂಜಿನ್‌ನಿಂದ ಹೊಗೆ ಬರುತ್ತಿರುವುದು ಪೈಲೆಟ್ ಗಮನಕ್ಕೆ ಬಂದಿತ್ತು. ತಕ್ಷಣವೇ ಪ್ರಯಾಣಿಕರನ್ನು ಮತ್ತು ವಿಮಾನದ ನೌಕರರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಏತನ್ಮಧ್ಯೆ, ವಿಮಾನದ ಟಯರ್‌ನಲ್ಲಾಗಲೀ, ಇಂಜಿನ್‌ನಲ್ಲಾಗಲೀ ಯಾವುದೇ ಸಮಸ್ಯೆ ಪತ್ತೆಯಾಗಿಲ್ಲ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.

Write A Comment