ನವದೆಹಲಿ: 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಅತ್ಯುತ್ತಮ ನಟ ಪ್ರಸಸ್ತಿ ಅಮಿತಾಬ್ ಬಚ್ಚನ್ ಪಾಲಾಗಿದ್ದು ಹಾಗೂ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಪೀಕೂ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅಮಿತಾಬ್ ಬಚ್ಚನ್ ಪ್ರಶಸ್ತಿ ಗಿಟ್ಟಿಸಿದ್ದು, ತನು ವೆಡ್ಸ್ ಮನು ರಿಟರ್ನ್ಸ್ ಚಿತ್ರದ ಅಭಿನಯಕ್ಕಾಗಿ ಕಂಗನಾ ಪ್ರಶಸ್ತಿ ಪಡೆದಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ – ದ ಬಿಗಿನಿಂಗ್ ಚಲನ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ
ಅತ್ಯುತ್ತಮ ನಿರ್ದೇಶಕ – ಸಂಜಯ್ ಲೀಲಾ ಬನ್ಸಾಲಿ ( ಭಾಜಿ ರಾವ್ ಮಸ್ತಾನಿ )
ಕಲ್ಕಿ ಕೊಚೆಲಿನ್- ತೀರ್ಪುಗಾರರ ವಿಶೇಷ ಪ್ರಶಸ್ತಿ (ಮಾರ್ಗರಿಟಾ ವಿಥ್ ಎ ಸ್ಟ್ರಾ)
ತನ್ವಿ ಆಜ್ಮಿ – ಅತ್ಯುತ್ತಮ ಸಹ ನಟಿ ( ಭಾಜಿರಾವ್ ಮಸ್ತಾನಿ)
ವಿಸಾರಣೈ – ಅತ್ಯುತ್ತಮ ಚಿತ್ರ (ತಮಿಳು)
ದಮ್ ಲಗಾಕೇ ಹೈಸಾ – ಅತ್ಯುತ್ತಮ ಚಿತ್ರ (ಹಿಂದಿ)
ರೆಮೋ ಡಿಸೋಜಾ -ಅತ್ಯುತ್ತಮ ನೃತ್ಯ ನಿರ್ದೇಶಕ (ಭಾಜಿರಾವ್ ಮಸ್ತಾನಿ)
ಭಾಜಿರಾವ್ ಮಸ್ತಾನಿ ಚಿತ್ರಕ್ಕೆ ಉತ್ತಮ ಪ್ರೊಡಕ್ಷನ್ ಡಿಸೈನ್, ಉತ್ತಮ ಛಾಯಾಗ್ರಹಣ ಕ್ಕಾಗಿರುವ ಪ್ರಶಸ್ತಿಯೂ ಲಭಿಸಿದೆ.
ಜೂಹಿ ಚತುರ್ವೇದಿ (ಪೀಕೂ) ಮತ್ತು ಹಿಮಾಂಶು ಶರ್ಮಾ (ತನು ವೆಡ್ಸ್ ಮನು ರಿಟರ್ನ್ಸ್ ) – ಉತ್ತಮ ಚಿತ್ರಕತೆ, ಸಂಭಾಷಣೆ
ವಿಶಾಲ್ ಭಾರದ್ವಾಜ್ (ತಲ್ವಾರ್ ಚಿತ್ರ) – ಉತ್ತಮ ಅಳವಡಿತ ಚಿತ್ರಕತೆಗಾಗಿ ಪ್ರಶಸ್ತಿ
ಸಿನಿಮಾ ಸ್ನೇಹಿ ರಾಜ್ಯ ಪ್ರಶಸ್ತಿ ಗುಜರಾತ್ಗೆ ಸಿಕ್ಕಿದೆ