ಕರ್ನಾಟಕ

ಇಂದು ಚಿರು ಪುತ್ರಿ ವಿವಾಹ: ಬೆಂಗಳೂರಿನಲ್ಲಿ ಚಿತ್ರರಂಗದ ಹಲವು ದಿಗ್ಗಜರು

Pinterest LinkedIn Tumblr

31

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ವಿವಾಹ ಇಂದು ಬೆಂಗಳೂರಿನ ಹೊರವಲಯದಲ್ಲಿರುವ ದೇವನಹಳ್ಳಿಯ ಚಿರು ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ.

ಶ್ರೀಜಾ ವಿವಾಹಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಶ್ರೀಜಾ ಎನ್ ಆರ್ ಐ ಉದ್ಯಮಿ ಕಲ್ಯಾಣ್ ಅವರನ್ನು ವರಿಸುತ್ತಿದ್ದಾರೆ. ಇಂದು ವಿವಾಹ ಸಮಾರಂಭ ನಡೆಯಲಿದ್ದು, ಮಾರ್ಚ್ 30 ರಂದು ಹೈದರಾಬಾದ್ ನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಇನ್ನೂ ಚಿರು ಪುತ್ರಿ ವಿವಾಹದಲ್ಲಿ ತೆಲುಗು, ಕನ್ನಡ ತಮಿಳು ಸೇರಿದಂತೆ ಹಲವು ಭಾಷೆಯ ನಟ ನಟಿಯರು ಭಾಗವಹಿಸುವ ನಿರೀಕ್ಷೆಯಿದೆ.

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಚಿರಂಜೀವಿ ಕುಂಟುಂಬದ ಆಪ್ತ ಗೆಳೆಯರಾಗಿದ್ದು ಅವರು ಸಹ ಶ್ರೀಜಾ ವಿವಾಹಕ್ಕೆ ಆಗಮಿಸಲಿದ್ದಾರೆ. ಇನ್ನು ರಜನಿಕಾಂತ್, ಸುಮಲತಾ ಅಂಬರೀಷ್ ಸೇರಿದಂತೆ ಹಲವು ಗಣ್ಯರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಇನ್ನೂ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ವಿವಾಹದ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದು, ಕೇವಲ ಕೆಲವೇ ಮಂದಿ ಆತ್ಮೀಯರು ಹಾಗೂ ಸಂಬಂಧಿಕರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.

Write A Comment