ಕರ್ನಾಟಕ

ಸುದೀಪ್ ಅಭಿನಯಿಸುತ್ತಿರುವ ಮುಕುಂದ ಮುರಾರಿ ಚಿತ್ರಕ್ಕಾಗಿ ತಯಾರಾಯ್ತು ಹೊಸ ಬೈಕ್

Pinterest LinkedIn Tumblr

bike

ಬಾಲಿವುಡ್ ನ ಓ ಮೈ ಗಾಡ್ ಚಿತ್ರ ಕನ್ನಡದಲ್ಲಿ ತಯಾರಾಗುತ್ತಿರುವುದು ತಿಳಿದ ವಿಚಾರವೇ..ಇದೀಗ ಲೇಟೆಸ್ಟ್ ಸುದ್ದಿ ಎಂದರೆ ಮುಕುಂದನ ಪಾತ್ರದಲ್ಲಿ ಅಭಿನಯಿಸುತ್ತಿರುವ ಸುದೀಪ್ ಅವರಿಗಾಗಿ ಬೈಕ್ ವೊಂದನ್ನು ರೆಡಿ ಮಾಡಲಾಗಿದೆ.

ಈ ಚಿತ್ರಕ್ಕಾಗಿ ವಿಶೇಷವಾಗಿ ತಯಾರಿಸಲಾಗಿರುವ ಬೈಕ್ ಗೆ ಮುಂಬೈ ತಯಾರಕರು ಹೊಸ ರೂಪ ಕೊಟ್ಟಿದ್ದು, ಇದಕ್ಕಾಗಿ 8 ಲಕ್ಷ ವ್ಯಯಿಸಲಾಗಿದೆಯಂತೆ. ಸದ್ಯ ನಿರ್ದೇಶಕ ನಂದಕಿಶೋರ್ ಉಪೇಂದ್ರರ ಜತೆ ಚಿತ್ರೀಕರಣ ನಡೆಸಿದ್ದು, ಉಪೇಂದ್ರ ಹಾಗೂ ಸುದೀಪ್ ಅವರನ್ನೊಳಗೊಂಡ ಚಿತ್ರದ ಹಾಡೊಂದನ್ನು ಚಿತ್ರೀಕರಿಸಲು ಸಿದ್ಧತೆ ನಡೆಸಿದ್ದಾರೆ.

ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದ ಮುಕುಂದನ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದು, ಪರೇಶ್ ರಾವಲ್ ಅವರು ನಟಿಸಿದ್ದ ನಾಸ್ತಿಕ ಪಾತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ.

Write A Comment