ಮುಂಬೈ

ಪ್ರೀತಿ ಹೆಚ್ಚಾಗಿ ಮೊಮ್ಮಗನನ್ನು ಕೊಂದು ಅಜ್ಜ ಆತ್ಮಹತ್ಯೆ!

Pinterest LinkedIn Tumblr

GRAND-PA-

ಪುಣೆ: ಅಜ್ಜನಿಗೆ ಮೊಮ್ಮಗನ ಮೇಲೆ ಸಿಕ್ಕಾಪಟ್ಟೆ ಪ್ರೀತಿ, ಆದ್ರೆ ಅದೇ ಅತಿಯಾದ ಪ್ರೀತಿ ವೃದ್ಧನಿಂದಲೇ ಮೊಮ್ಮಗನ ಕೊಲೆ ಮಾಡಿಸುವಂತೆ ಮಾಡಿದೆ. ಇಂತಹದೊಂದು ವಿಚಿತ್ರ ಘಟನೆ ಪುಣೆಯಲ್ಲಿ ನಡೆದಿದೆ.

ಪುಣೆಯ ಕೊಂಡ್ವಾ ಬುಂದ್ರುಕ್ ಶಾಂತಿ ನಗರದ ನಿವಾಸಿ 65 ವರ್ಷದ ಸುಧೀರ್ ದಗ್ದುಮಲ್ ತಮ್ಮ ಮೊಮ್ಮಗ ಜಿನಯ್‍ನನ್ನು ಬಿಟ್ಟಿರಲು ಸಾಧ್ಯವಿಲ್ಲವೆಂದು ಆತನನ್ನು ಕೊಲೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟಿದ್ದಾರೆ. ಸಾವಿನ ಬಗ್ಗೆ ಡೆತ್ ನೋಟ್ ಬರೆದಿರುವ ಸುಧೀರ್ ನನಗೆ ಮೊಮ್ಮಗನನ್ನು ಬಿಟ್ಟಿರಲು ಸಾಧ್ಯವಿಲ್ಲ, ನಾನು ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಸುಧೀರ್ ಕಳೆದ 15 ವರ್ಷಗಳಿಂದ ಕುಟುಂಬ ಕಲಹಕ್ಕೆ ಸಂಬಂಧಿಸದಂತೆ ಕೋರ್ಟ್ ವಿಚಾರಣೆ ಎದುರಿಸುತ್ತಿದ್ದು, ಈ ಬಾರಿ ಕೋರ್ಟ್‍ಗೆ ಹೋಗುವ ಬದಲಾಗಿ ಸಾಯುತ್ತೇನೆ ಎಂದು ಬರೆದಿದ್ದಾರೆ. ಅದರಂತೆ ಮೊಮ್ಮಗನನ್ನು ಕೊಂದು ತಾವು ಮಾರ್ಚ್ 19ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಮೊಮ್ಮಗನನ್ನು ಬಿಟ್ಟಿರಲು ಸಾಧ್ಯವಿಲ್ಲವೆಂದು ಆತನನ್ನು ಕೊಲೆ ಮಾಡಿದ್ದು ಎಷ್ಟು ಸರಿ ಎನ್ನುವುದು ಇದೀಗ ಎಲ್ಲರ ಪ್ರಶ್ನೆಯಾಗಿದೆ.

Write A Comment