ಕನ್ನಡ ವಾರ್ತೆಗಳು

ಕುಡಿಯೋದೇ ಇವರ ವೀಕ್ನೆಸ್ಸು…ಹೊಡೆದಾಡೋದೆ ಇವರ ಬ್ಯುಸಿನೆಸ್ಸು: ಕುಂದಾಪುರದಲ್ಲಿ ನೇಪಾಳಿ ಕುಡುಕರ ಕಿರಿಕ್..!

Pinterest LinkedIn Tumblr

ಕುಂದಾಪುರ: ಕೆಲಸಕ್ಕೆಂದು ದೂರದ ನೇಪಾಳದಿಂದ ಹಲವು ತಿಂಗಳುಗಳ ಹಿಂದೆ ಕುಂದಾಪುರದ ತ್ರಾಸಿಗೆ ಬಂದಿದ್ದ ಇವರಿಬ್ಬರು ಯುವಕರು ಬುಧವಾರದಂದು ಕುಡಿದು ಮಾಡಿದ ಕಿರಿಕ್ ಪೊಲೀಸರು ಹಾಗೂ ಸಾರ್ವಜನಿಕರಲ್ಲಿ ತಲೆನೋವುಂಟು ಮಾಡಿತ್ತು.

ನೇಪಾಳ ಮೂಲದ ದೀಪಕ್ ಮತ್ತು ರೋಯ್ ಎನ್ನುವವರೇ ಈ ಕಿರಿಕ್ ಪಾರ್ಟಿಗಳು.

Kundapura_Drinkers_Problem (1) Kundapura_Drinkers_Problem (3) Kundapura_Drinkers_Problem (2)

ಎಣ್ಣೆಯ ಅಮಲು….
ಕುಂದಾಪುರದ ಗಂಗೊಳ್ಳಿ ಸಮೀಪದ ತ್ರಾಸಿಯ ಪಾಸ್ಟ್ ಫುಡ್ ಅಂಗಡಿಯೊಂದರಲ್ಲಿ ಕುಕಿಂಗ್ ಸ್ಪೆಷಲಿಸ್ಟ್ ಆಗೈದ್ದ ದೀಪಕ್ ಎಂಬಾತನಿಗೆ ರಾಯ್ ಸಹಾಯಕನಾಗಿದ್ದ. ಬುಧವಾರ ಮಧ್ಯಾಹ್ನ ಕೆಲಸ ಬಿಡುವಿದ್ದ ಕಾರಣ ಇಬ್ಬರು ಹೆಮ್ಮಾಡಿಯ ಬಾರ್ ಒಂದರಲ್ಲಿ ಕಂಠಪೂರ್ತಿ ಕುಡಿದಿದ್ದಾರೆ. ಕುಡಿತದ ಅಮಲು ಏರುತ್ತಿದ್ದಂತೆಯೇ ಇಬ್ಬರಿಗೂ ಮನಸ್ಸಿನ ಹಿಡಿತ ತಪ್ಪಿದೆ. ಅಲ್ಲಿಗೆ ಆರಂಭವಾಗಿದ್ದೇ ಇವರ ಮಂಗನಾಟ. ಇಬರು ಪರಸ್ಪರ ಕಿತ್ತಾಟಕ್ಕೆ ಮುಂದಾಗಿದ್ದಾರೆ. ಮೊದಮೊದಲು ಇದು ಕುಡುಕರ ಜಗಳ ಎಂದು ಸಾರ್ವಜನಿಕರು ಇತ್ತ ತಲೆ ಹಾಕಿಲ್ಲ. ಆದರೇ ಬರುಬರುತ್ತಾ ಇಬ್ಬರ ಜಗಳ ತಾರಕಕ್ಕೇರುವ ಲಕ್ಷಣ ಬಂದು ಮಾರಾಮಾರಿ ಜಾಸ್ಥಿಯಾಗುವ ವೇಳೆ ಸ್ಥಳಿಯ ಪರಿಸರದ ನಾಗರೀಕರು ಇಬ್ಬರನ್ನು ಸಮಾಧಾನ ಪಡಿಸಲು ಮುಂದಾಗುತ್ತಾರೆ. ಆಗಲೇ…..

ಸಾರ್ವಜನಿಕರಿಗೂ ಹೊಡೆದರು..!
ಮಾರಣಾಂತಿಕವಾಗಿ ಹೊಡೆದಾಡುತ್ತಿದ್ದ ಇಬ್ಬರನ್ನು ಬಿಡಿಸಿ ಸಮಧಾನ ಮಾಡಲು ಮಧ್ಯಪ್ರವೇಶಿಸಿದ ಸಾರ್ವಜನಿಕರ ಮೇಲು ಕುಡುಕ ಮಹಾಷಯರು ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ಗರಂ ಆದ ಸಾರ್ವಜನಿಕರು ಇಬ್ಬರಿಗೂ ಥಳಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ಠಾಣೆಗೆ ಕರೆದೊಯ್ದು ಒಂದಷ್ಟು ಹೊತ್ತು ಇರಿಸಿಕೊಂಡು ಬಳಿಕ ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ. ಆದರೇ ಇಲ್ಲಿಗೆ ನಿಲ್ಲಲಿಲ್ಲ ಇವರಿಬ್ಬರ ರಾದ್ಧಾಂತ.

ನಗರದ ಶಾಸ್ತ್ರೀವ್ರತ್ತದಲ್ಲಿ ಕಿರಿಕ್
ಪೊಲೀಸ್ ಠಾಣೆಯಿಂದ ಹೊರಗೆ ಬಂದ ಇಬ್ಬರು ಅಲ್ಲಿಂದ ಕುಂದಾಪುರದ ಕುಂದಾಪುರದ ಶಾಸ್ತ್ರಿ ವ್ರತ್ತಕ್ಕೆ ಬಂದು ಮತ್ತದೇ ಹೊಡೆದಾಟಕ್ಕೆ ಇಳಿದಿದ್ದಾರೆ. ಶಾಲಾ-ಕಾಲೇಜು ಮುಗಿದ ಸಮಯವಾದ ಕಾರಣ ಇದು ವಿಧ್ಯಾರ್ಥಿಗಳು, ಪ್ರಯಾಣಿಕರು ಮತ್ತು ವಾಹನ ಸವಾರರಲ್ಲಿ ಕಿರಿಕಿರಿ ಉಂಟು ಮಾಡಿತ್ತು. ಅದಾಗಲೇ ಅಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಠಾಣೆ ಸಿಬ್ಬಂಧಿಯೋರ್ವರು ಇಬ್ಬರ ಜಗಳ ಬಿಡಿಸಲು ಮುಂದಾದಾಗ ಪೊಲೀಸ್ ಮೇಲೆಯೂ ತಳ್ಳಾಟ ನಡೆಸಿದ್ದಾರೆ. ಕೂಡಲೇ ಪೊಲೀಸ್ ಸಿಬ್ಬಂದಿ ಠಾಣೆಗೆ ಕರೆ ಮಾಡಿದ್ದು ಹತ್ತಾರು ಪೊಲೀಸರು ಆಗಮಿಸಿ ಇಬ್ಬರನ್ನು ಹೆಡೆಮುರಿಕಟ್ಟಿ ಠಾಣೆಗೆ ಕರೆದೊಯ್ದು ಬಳಿಕ ಅಲ್ಲಿ ನೀರಿನಿಂದ ಮಜ್ಜನ ಮಾಡಿಸಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ. ಬಳಿಕ ಇಬ್ಬರ ಮದ್ಯದ ಅಮಲು ಇಳಿದ ಮೇಲೆ ಕಳುಹಿಸಲಾಗಿದೆ.

ಜಾಸ್ಥಿಯಾಗುತ್ತಿರುವ ಪುಂಡರ ಕಾಟ
ಇನ್ನು ಕೆಲಸಕ್ಕಾಗಿ ವಲಸೆ ಕಾರ್ಮಿಕರಾಗಿ ಬರುವ ಅನ್ಯರಾಜ್ಯ ಹಾಗೂ ಇತರೇ ಪ್ರದೇಶದ ಮಂದಿ ಸಂಜೆ ವೇಳೆಯಲ್ಲಿ ಬಾರು ಮೊದಲಾದೆಡೆ ಕುಡಿದು ಗಲಾಟೆ ಮಾಡುವುದು, ಮಹಿಳೆಯರಿಗೆ ಚುಡಾಯಿಸುವ ಕಿರಿಕ್ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿದ್ದು ಈ ಬಗ್ಗೆ ಇಲಾಖೆಯೂ ಗಮನಹರಿಸಿಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Write A Comment