ಮುಂಬೈ

ಗೇಲ್ ಜೊತೆ ಪಾರ್ಟಿ ಮಾಡಿದ ನಟಿ ಸ್ನೇಹಾ ಉಳ್ಳಾಲ್

Pinterest LinkedIn Tumblr

snehaಮುಂಬೈ : ಬಾಲಿವುಡ್, ಟಾಲಿವುಡ್ ನ ಹೆಸರಾಂತ ನಟಿ ಸ್ನೇಹಾ ಉಲ್ಲಾಳ್ ವೆಸ್ಟ್‌‌ವಿಂಡೀಸ್‌ ಆಟಗಾರ ಕ್ರಿಸ್‌ ಗೇಲ್‌ ಜೊತೆ ಪಾರ್ಟಿ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹಲವು ಸಮಯಗಳಿಂದ ಕಾಣಿಸಿಕೊಳ್ಳದ ನಟಿ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ಫೋಟೋ ಹಾಕುವ ಮೂಲಕ ಧಿಡೀರನೆ ಪ್ರತ್ಯಕ್ಷರಾಗಿದ್ದಾರೆ. ಮಂಗಳವಾರ ನಡೆದ ಭಾರತ ಹಾಗೂ ನ್ಯೂಜಿಲ್ಯಾಂಡ್‌ ನಡುವಣ ಪಂದ್ಯ ವೀಕ್ಷಿಸಿದ್ದಾರೆ. ಬಳಿಕ ವೆಸ್ಟ್‌‌ವಿಂಡೀಸ್‌ ಆಟಗಾರರಾದ ಕ್ರಿಸ್‌ ಗೇಲ್‌ ಹಾಗೂ ಡ್ವೇನ್‌ ಬ್ರಾವೋ ಜೊತೆ ಪಾರ್ಟಿ ಮಾಡಿದ ಫೋಟೋಗಳನ್ನು ಸ್ನೇಹಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಾತ್ರವಲ್ಲದೇ ‘ಕ್ಯೂಟ್ ಗೇಲ್’ ಎಂಬುವುದಾಗಿ ಹೊಗಳಿದ್ದಾರೆ.

ಮೂಲತಃ ಮಂಗಳೂರಿನವರಾದ ಸ್ನೇಹಾ ಉಲ್ಲಾಳ್ ಬಾಲಿವುಡ್‌‌ನಲ್ಲಿ ಬ್ಯಾಡ್‌ಬಾಯ್‌‌ ಸಲ್ಮಾನ್‌ ಖಾನ್‌ ಜೊತೆ ತಮ್ಮ ಸಿನಿ ಜರ್ನಿ ಆರಂಭಿಸಿದ್ದರು. ತೆಲುಗಿನಲ್ಲಿಯೂ ಸಹ ಕೆಲವು ಚಿತ್ರಗಳನ್ನು ಮಾಡಿದ್ದಾರೆ. ತೆಲುಗು ಹಿರಿಯ ನಟ ಬಾಲಕೃಷ್ಣ ಜೊತೆ ಸಿಂಹ ಎಂಬ ಚಿತ್ರದಲ್ಲಿ ನಟಿಸಿದ್ದಾರೆ.

Write A Comment