ಮುಂಬೈ

ಥಾಣೆಯಲ್ಲಿ ನಡೆದಿದ್ದ ಒಂದೇ ಕುಟುಂಬದ 14 ಮಂದಿ ಹತ್ಯೆ: ಪ್ರಕರಣಕ್ಕೆ ಹೊಸ ಟ್ವಿಸ್ಟ್

Pinterest LinkedIn Tumblr

Thane insident

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಕಳೆದ ಫೆಬ್ರವರಿ 28 ರಂದು ನಡೆದ ಒಂದೇ ಕುಟುಂಬದ 14 ಮಂದಿ ಸದಸ್ಯರ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಆರೋಪಿ ಹಸ್ನಾನಿ ಮಾನಸಿಕ ಅಸ್ವಸ್ಥೆ ಸಹೋದರಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ಸತ್ಯ ಮನೆಯವರಿಗೆಲ್ಲಾ ಗೊತ್ತಾದಾಗ ಸಂಪೂರ್ಣ ಪರಿವಾರವನ್ನು ಹತ್ಯೆಗೈದಿದ್ದಾನೆ ಎಂಬ ಸತ್ಯ ತನಿಖೆಯಿಂದ ಬಹಿರಂಗವಾಗಿದೆ.

ಈ ಹತ್ಯಾಕಾಂಡದಲ್ಲಿ ಬದುಕುಳಿದಿರುವ ಸುಬಿಯಾ ಬಾರ್ಮರ್ ( ಆರೋಪಿ ಹಸ್ನಾನಿ ವಾರೇಕರ್ ಸಹೋದರಿ) ಪೊಲೀಸರಿಗೆ ನೀಡಿದ ಹೇಳಿಕೆ ಪ್ರಕಾರ, ತನ್ನ ಅಣ್ಣ ಸಹೋದರಿ ಮೇಲೆ ಫೆಬ್ರವರಿ 4 ರಂದು ಅತ್ಯಾಚಾರ ಮಾಡಿದ್ದ. ಘಟನೆಯ ಬಳಿಕ ಸ್ಕಿಜೋಫ್ರೇನಿಯಾಕ್ಕೆ ಒಳಗಾಗಿದ್ದ ಹಸ್ನೇನ್ ಸತ್ಯ ಹೊರಬಿದ್ದ ಕಾರಣಕ್ಕೆ ತನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರಿಯರು ಅವರ ಮಕ್ಕಳು ಸೇರಿದಂತೆ ಒಟ್ಟು 14 ಜನರನ್ನು ಕತ್ತು ಸೀಳಿ ಕೊಂದು ಹಾಕಿದ್ದ.

ಹಸ್ನೇನ್ ದಾಳಿಯಿಂದ ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾಗಿ ಆಸ್ಪತ್ರೆ ಸೇರಿರುವ ಸುಬಿಯಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆ. ಆಕೆ ಸಂಪೂರ್ಣವಾಗಿ ಗುಣಮುಖಳಾದ ಬಳಿಕ ಕೊಲೆಯ ಬಗ್ಗೆ ಮತ್ತಷ್ಟು ಮಾಹಿತಿಗಳು ಹೊರಬೀಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ವಂತ ಉದ್ಯಮ ಸ್ಥಾಪಿಸಲು ಆರೋಪಿ ತನ್ನ ಸಂಬಂಧಿಕರಿಂದ 68 ಲಕ್ಷ ರೂಪಾಯಿ ಸಾಲ ಮಾಡಿದ್ದ. ಇದು ಕೂಡ ಹತ್ಯಾಕಾಂಡಕ್ಕೆ ಒಂದು ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Write A Comment